ಮಂಗಳೂರು, ಸೆ 25: ನಗರದ ಲೇಡಿಹಿಲ್ ಮತ್ತು ಮೈದಾನ್ ವೆಸ್ಟ್ ರೋಡಿನ ಪೆಟ್ರೋಲ್ ಪಂಪ್ ಸಂಸ್ಥೆ ಸಾಹುಕಾರ್ ಎಂ ಬಾಬಾ ಪೈ ಅಂಡ್ ಕಂಪನಿ ಇದರ ಆಡಳಿತ ಪಾಲುದಾರ ಸಾಹುಕಾರ ಎಂ ರಘುನಾಥ ಪೈ ಯಾನೆ ಗೋಪಾಲಕೃಷ್ಣ ಪೈ (76 ವ.) ಇವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಇಂದು (ಸೆಪ್ಟೆಂಬರ್ 25) ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಶ್ರೀಯುತರು ನಗರದ ರಥಬೀದಿಯಲ್ಲಿರುವ ಶ್ರೀ ಕಾಳಿಂಗ ಮರ್ಧನ ಮಹಾಲಸಾ ನಾರಾಯಣಿ ದೇವರು ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು. ಅಲ್ಲದೆ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಸಹ ಆಗಿದ್ದರು.
ಇವರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.