ವಿಶ್ವದ ಅತೀ ಪುನೀತ ಪುಣ್ಯ ಭೂಮಿ ನಮ್ಮ ಭಾರತ.ಭಾರತದಲ್ಲಿ ಹುಟ್ಟಿದ ನಾವೇ ಪುಣ್ಯವಂತರು.ಭಾರತದ ಧೂಳಿನ ಕಣ ಕಣದಲ್ಲಿ ದೈವತ್ವವೇ ಅಡಗಿದೆ. ಭಾರತ ಕೇವಲ ದೇಶವಲ್ಲ ಮನುಕುಲದ ತೊಟ್ಟಿಲು.ಕಳೆದ ವರ್ಷ ಕೋರೋನದ ದಾಳಿಗೆ ತತ್ತರಿಸಿ ಚೇತರಿಸಿಕೊಳ್ಳುತ್ತಿರುವಾಗಲೇ ಕೋರೋನದ ಎರಡನೇ ಅಲೆಗೆ ತತ್ತರಿಸಿ ಇರೋದು ನೋವು ಉಂಟು ಮಾಡುತ್ತಿದೆ.
ಭಾರತೀಯರು ಎಲ್ಲಾರೂ ಒಂದಾಗಿ ಕೋರೋನ ಸಂಕಷ್ಟವನ್ನು ಎದುರಿಸಬೇಕು.ದೇಶಕ್ಕೆ ನಾವು ಒಂದು ಸಂಖ್ಯೆ ಕೋರೋನಕ್ಕೆ ನಾವು ಕೇವಲ ಒಂದು ಜೀವ ನಮ್ಮವರಿಗೆ ನಾವು ದೊಡ್ಡ ಸಂಪತ್ತು ನಮಗೆ ನಾವೇ ಅಮೂಲ್ಯ ರತ್ನ.
ಭಗವತ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೇ ಪ್ರಯತ್ನಕ್ಕೆ ಫಲವಿದೆ .ನಮ್ಮೊಳಗೆ ಅಧ್ಭುತ ಶಕ್ತಿಯಿದೆ ಅಂತಾ. ಏನೇ ಬಂದರು ಹೆದರಬೇಡಿ ಜೀವನವೇ ಹೋರಾಟ ಹೋರಾಡಿ ಅಂತಾ. ನಮ್ಮ ಜೀವಕ್ಕಾಗಿ ನಮ್ಮ ದೇಶಕ್ಕಾಗಿ ನಾವು ಹೋರಾಡಲೇಬೇಕು ನಮ್ಮ ಹೋರಾಟ ಹೇಗಿರಬೇಕು ಅಂದರೆ ನಾವು ಮಾಸ್ಕ ಧರಿಸಲೇಬೇಕು,ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ,ಬಿಸಿ ನೀರು ಕುಡಿಯಬೇಕು, ಕೈಯನ್ನು ತೊಳೆಯುತ್ತ ಇರೀ ಮನೆಗೆ ತರುವ ಎಲ್ಲಾ ವಸ್ತುಗಳನ್ನು ಬಿಸಿನೀರಿಗೆ ಉಪ್ಪು ಬೇರೆಸಿ ತೊಳೆದುಕೊಳ್ಳಿ ಅಗತ್ಯವಿಲ್ಲದೆ ಮನೆಯಿಂದ ಹೊರಗೆ ಹೋಗಬಾರದು ಯೋಗ ಧ್ಯಾನ ಪ್ರಾಣಯಾಮ ಮಾಡಬೇಕು ಒಳ್ಳೆಯ ಆಹಾರ ಸೇವಿಸಬೇಕು ಆರೋಗ್ಯದ ಗುಟ್ಟು ಇರೋದೇ ಶುದ್ಧವಾದ ನೀರು ಶುದ್ಧವಾದ ಗಾಳಿಯಲ್ಲಿ ಜೀವ ನಮ್ಮ ಮನೆಯವರ ಜವಬ್ದಾರಿ ನಮ್ಮದೇ ಗಂಡಾಂತರ ಕಣ್ಣ ಮುಂದೆ ಇದೆ ಇನ್ನೂ ಮೈಮರೆಯೋದು ಬೇಡಾ .ತೋರು ಬೆರಳು ಉಂಗುರದ ಬೆರಳು ಹೆಬ್ಬೆರಳು ಸೇರಿಸಿ ರುದ್ರ ಮುದ್ರೆ ಹಾಕಿ ಮೃತ್ಯುಂಜಯ ಮಂತ್ರವನ್ನ ಪಠಿಸಿ. ಜಗತ್ತಿನಲ್ಲಿ ಶಕ್ತಿಶಾಲಿ ಆದದ್ದು ಭಗವಂತ ಭಗವಂತನ ಆತ್ಮ ನಮ್ಮೊಳಗೆ ಇದೆ ನಮ್ಮ ಮನಸ್ಸಿನಲ್ಲಿ ಅಧ್ಭುತ ಶಕ್ತಿಯಿದೆ .ನಮ್ಮೊಳಗೆ ನಾವು ಶಕ್ತಿಶಾಲಿ ಆಗಬೇಕು ಹೆದರಿಕೊಳ್ಳದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ನಮಗಾಗಿ ನಮ್ಮ ಜೀವಕ್ಕಾಗಿ ಒಳ್ಳೆಯದನ್ನು ಮಾಡಿಕೊಳ್ಳುವ.ಕೋರೋನದ ರೂಪಾಂತರದ ಎರಡನೇ ಅಲೆಯನ್ನು ಧೈರ್ಯದಿಂದ ಎದುರಿಸುವ .
ಸದೃಢ ಶರೀರ ಶಕ್ತಿಯುತ ಮನಸ್ಸುನನ್ನು ನಾವು ಮಾಡಿಕೊಂಡು ನಮ್ಮ ಜಾಗೃತಿಯಲ್ಲಿ ನಾವು ಇದ್ದು ಎಲ್ಲಾವನ್ನು ಪಾಲಿಸಿದರೆ ಕೋರೋನ ನಮ್ಮ ಬಳಿ ಸುಳಿಯುವುದಿಲ್ಲ .ಹಿಂದಿನವರು ಹೇಳಿದ್ದಾರೆ ಅಲ್ವಾ ಜೀವ ಒಂದು ಇದ್ದರೆ ಬೆಲ್ಲ ಬೇಡಿ ಬದುಕುಬಹುದೆಂದು.
- ರೇಷ್ಮಾ ಶೆಟ್ಟಿ