ಭಾರೀ ಗಾಳಿ ಮಳೆಯಿಂದಾಗಿ ಕಡಲು ಮರದೆತ್ತರ ಅಲೆ ಎಸೆದದ್ದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಮಲ್ಪೆ ಬಂದರಿಗೆ ವಾಪಾಸಾಗಿ ಲಂಗರು ಹಾಕಿವೆ.

60% ಮೀನುಗಾರಿಕೆ ಬೋಟುಗಳು ಮಲ್ಪೆ ಬಂದರಿನಲ್ಲಿ ನಿಂತಿವೆ. ಉಳಿದವು ಗೋವಾದ ವಾಸ್ಕೋ, ಕಾರವಾರ ಬಂದರುಗಳನ್ನು ಆಶ್ರಯಿಸಿವೆ.

ಆಗಸ್ಟ್ 1ರಿಂದ ಮೀನುಗಾರಿಕೆ ಆರಂಭವಾಗಿ ಆದಾಯ ಬರುವ ಹೊತ್ತಿನಲ್ಲಿ ಮತ್ತೆ ಕಡಲು ಹೆದರಿಸಿದೆ ಎಂದು ಹಲವರು ಅಲವತ್ತುಕೊಂಡರು.