10.9.21ರಿಂದ 19.9.21 ಬಾದ್ರ ಪದ ಮಾಸ ದ ಮಹಾ ಪರ್ವ. ಮತ್ತೊಮ್ಮೆ ಬಂದಿದೆ ಪರ್ವ ಗಳ ರಾಜ ದಶಲಕ್ಷಣ ಪರ್ವ,ಇದು ಭೋಗದ ಪರ್ವವಲ್ಲ, ತ್ಯಾಗದ ಪರ್ವ, ವೀತರಾಗಿ ಪರ್ವ.  ವೈರಾಗ್ಯದ ಕಡೆ ಮನಸ್ಸನ್ನು ಬಾಗಿಸುವ ಪರ್ವ.

ಇದು ವರ್ಷದಲ್ಲಿ ಮೂರು ಬಾರಿ ಬರುವುದು. ಆದರೆ ಚಾತುರ್ಮಾಸ್ಯದ ನಿಮಿತ್ತ ದಿಗಂಬರ ಮುನಿಗಳ ಸಾನ್ನಿಧ್ಯ, ಮಾರ್ಗದರ್ಶನ ದೊರೆಯುವ ಭಾದ್ರಪದ ಮಾಸದಲ್ಲಿ ಬರುವ ಪರ್ವಕ್ಕೆ ವಿಶೇಷ ಮಹತ್ವ ಬಂದಿದೆ. ಈ ಮಾಸದ ಶುದ್ಧ ಪಂಚಮಿಯಿಂದ ಚತುರ್ದಶಿಯವರೆಗೆ- 10 ದಿನಗಳ ಕಾಲ - ಆಚರಿಸಲಾಗುವುದು.  ಅಲ್ಲದೆ ಪರ್ವದ ಮುಕ್ತಾಯದ ಮೂರನೆಯ ದಿನ ಕ್ಷಮೆ ಕೇಳುವ ದಿನವಾಗಿದೆ.

ಎಲ್ಲ ಕಾಲದ, ಎಲ್ಲ ಪ್ರದೇಶದ, ಎಲ್ಲ ಜೀವಗಳಿಗೆ ಸಂಬಂಧಿಸಿದ ಆಂತರಿಕವಾದ ಆಧ್ಯಾತ್ಮಿಕ ಪರ್ವ.  ಇದು ನಮ್ಮನಮ್ಮ ಭವನೆಗಳನ್ನು ತಿದ್ದಿ, ತೀಡಿ, ಸೋಸಿ, ಪರಿಶುದ್ಧಗೊಳಿಸಿ ಕೊಳ್ಳುವ ಹಬ್ಬ.  ವಿಕಾರಿ ಭಾವನೆಗಳನ್ನು ಪರಿತ್ಯಜಿಸಿ, ಉದಾತ್ತ ಭಾವನೆಗಳನ್ನು ಸ್ವೀಕರಿಸುವುದೇ ಈ ಪರ್ವದ ಮೂಲ ಉದ್ದೇಶ.

ಈ ಪರ್ವದಲ್ಲಿ ಶ್ರದ್ಧಾವಂತರು ಸಂಯಮಿಗಳಾಗುತ್ತಾರೆ.  ಪೂಜಾ ಪಾಠಗಳಲ್ಲಿ ನಿರತರಾಗುತ್ತಾರೆ.

ಈ ಸಂಧರ್ಭ 108 ದಿವ್ಯ ಸಾಗರ ಮುನಿ ವರ್ಯ ರ ಪಾವನ ಸಾನ್ನಿಧ್ಯ ದಲ್ಲಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಉಪಸ್ಥಿತಿ ಮಾರ್ಗ ದರ್ಶನ ದಲ್ಲಿ ಜೈನ ಕಾಶಿ ಜೈನ ಮಠ ದಲ್ಲಿ ಬೆಳಿಗ್ಗೆ 7.00 ರಿಂದ 9.00 ರ ವರೆಗೆ 10.9.21ರಿಂದ 19.9.21 ರ ವರೆಗೆ ಗುರು ಬಸದಿ ಯಲ್ಲಿ11.9.21ರಿಂದ ಹತ್ತು ದಿನ ಪರ್ಯಂತ 2.00ರಿಂದ 3.00ಗಂಟೆ ವರೆಗೆ ದಶಲಕ್ಷಣ ನೋಂಪಿ ಪೂಜೆ ಸರಳ ರೂಪ ದಲ್ಲಿ ಪೂಜೆ ಗೆ ಮಾತ್ರ ಸೀಮಿತ ಗೋಳಪಟ್ಟು ಆಚರಿಸಲಾಗುದು.

ಭಟ್ಟಾರಕರು 10ದಿನ ತತ್ತ್ವಾರ್ಥ ಸೂತ್ರ ದಿನ ಕ್ಕೆ ಒಂದು ಅಧ್ಯಾಯ ಪಠಣ ಮಾಡಿ ಆನ್ ಲೈನ್ ಮೂಲಕ ಮಂಗಲ ಆಶೀರ್ವಾದ ನೀಡುವರು 20.09.21 ರಂದು ವ್ಯೆಕ್ತಿ ವ್ಯೆಕ್ತಿ ಗಳ ಮಧ್ಯೆ ಗೊತ್ತಿದ್ದೋ ಗೊತ್ತಿಲ್ಲ ದೆಯೋ ಆದ ತಪ್ಪಿಗೆ ಪರಸ್ಪರ ಪಶ್ಚಾತ್ತಾ ಪ ಪಟ್ಟು ಕ್ಷಮೆ ಯಾಚಿಸುವ ಪರ್ವ ಕ್ಷಮಾ ವಳಿ ಆಚರಿಸಲಾಗುದು.

ವ್ರತ ನಿರತ ರು ಈ 10ದಿನ 10 ಉಪವಾಸ ಹಾಗೂ ತಮಗೆ ಶಕ್ತಿ ಇದ್ದಷ್ಟು ಉಪವಾಸ ಮಾಡುತ್ತಾರೆ.

ನೀರನ್ನೂ ಸೇವಿಸದೆ ಮಾಡುವ ನಿರ್ಜಲ ಉಪವಾಸ ದೇಶದಾ ಧ್ಯ 0ತ ಅಬಾಲ ವೃದ್ದಾ ರಾದಿ ಆಚರಿಸುವರು ಜೈನ ರು ಸ್ವಾಧ್ಯಾಯ, ತತ್ತ್ವಚರ್ಚೆಯಲ್ಲಿ ತೊಡಗುತ್ತಾರೆ.  ವಿದ್ವಾಂಸ ರ ಪ್ರವಚನ ಕೇಳುತ್ತಾರೆ.

ಶ್ರಮಣರಿದ್ದರೆ ಧರ್ಮ ಶ್ರವಣ ಮಾಡುತ್ತಾರೆ. ಅಲ್ಲದೆ ದಶಲಕ್ಷಣ ಹೆಸರಿನ ನೋಂಪಿಯೊಂದಿದೆ, ಅದನ್ನು ವ್ರತಿಕ ಶ್ರಾವಕ ಶ್ರಾವಕರು ಆಚರಿಸುವರು. ‘ಧರ್ಮ’ವನ್ನು ಅನೇಕ ಮಗ್ಗಲು­ಗಳಿಂದ ಆಚಾರ್ಯರು ಹೀಗೆ ಸೂತ್ರೀಕರಿಸಿದ್ದಾರೆ- 1. ಧರ್ಮ ವಸ್ತು ಸ್ವಭಾವವಾಗಿದೆ. 2. ಧರ್ಮ ರತ್ನತ್ರಯ ಧರ್ಮವಾಗಿದೆ. 3. ಧರ್ಮ ಎಲ್ಲ ಜೀವಗಳ ರಕ್ಷಣೆಯಾಗಿದೆ. 4. ಧರ್ಮವು ಕ್ಷಮಾದಿ ಭಾವನೆಗಳ ದೃಷ್ಟಿಯಿಂದ ದಶ­ವಿಧವಾಗಿದೆ.  ಕೊನೆಯ ಈ ದಶ ಧರ್ಮಗಳ ಆರಾಧನೆಯೇ ದಶಲಕ್ಷಣ ಪರ್ವದ ಪರಮ ಲಕ್ಷ್ಯವಾಗಿದೆ.

ಧರ್ಮದ ಆ ದಶ ಧರ್ಮ ಪ್ರಾಕೃತ ಭಾಷೆ ಯಲ್ಲಿ ಹತ್ತು ಲಕ್ಷಣಗಳು ಹೀಗಿವೆ-ಎಂದು ವಿವರಿಸಿದ್ದಾರೆ. 

ಉತ್ತಮ ಖಮ-ಮದ್ದವಜ್ಜವ-ಸಚ್ಚ-ಸಉಚ್ಚಂ ಚ ಸಂಜಮಂ ಚೇವ |

ತವ-ಚಾಗಮಕಿಂಚಣ್ಹಂ, ಬಂಹ ಇದಿ ದಸವಿಹೋ ಧಮ್ಮೋ ||

ಉತ್ತಮ ಕ್ಷಮೆ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ. ತಪ, ತ್ಯಾಗ, ಆಕಿಂಚನ್ಯ ಹಾಗೂ ಬ್ರಹ್ಮಚರ್ಯ - ಇವು ಹತ್ತು ಧರ್ಮಗಳಾಗಿವೆ. ಈ ಒಂದೊಂದು ಧರ್ಮಗಳು ಪರ್ವದ ಒಂದೊಂದು ದಿನಗಳಿಗೆ ಮೀಸಲಾಗಿದೆ. ಆ ದಿನ ಆಯಾ ಧರ್ಮದ ಸ್ವಭಾವ ಹಾಗೂ ಅದನ್ನು ಕೆಡಿಸುವ ವಿಭಾವದ ಬಗ್ಗೆ ಚರ್ಚಿಸಲಾಗುವುದು.  ಧರ್ಮದ ಈ ಲಕ್ಷಣಗಳನ್ನು ತಿಳಿಯುವುದರ ಮೂಲಕ ಧರ್ಮ(ಎಂದರೆ ಆತ್ಮಧರ್ಮ)ವನ್ನು ಅರಿಯಲು ಪ್ರಯತ್ನಿಸಲಾಗುವುದು.  ಇದೇ ಈ ಪರ್ವದ ಪ್ರಯೋಜನ.