ಫರ್ಲಾ,  ಬಂಟ್ವಾಳ: ವೆಲಂಕಣಿ ಮಾತೆ ದೇವಾಲಯ ಫರ್ಲಾ, ಮಹಿಳಾ ಸಕಘಟನೆ ಫರ್ಲಾ ಘಟಕ . ಮತ್ತು ಸ್ತ್ರೀ ಆಯೋಗ ಫರ್ಲಾ ಇವರ ಸಹಭಾಗಿತ್ವದಲ್ಲಿ ಜುಲೈ 27 ರಂದು 'ಗ್ರಾಂಡ್ ಪೇರೆಂಟ್ಸ್ ಡೇ' ,ಮತ್ತು ಆಟಿಡೊಂಜಿ ಕೂಟ ಬಹು ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 10.00 ಗಂಟೆಗೆ ಚರ್ಚ್ ಧರ್ಮಗುರು ಅತೀ ವಂದನೀಯ ತಿಯೊದೊರಾ ಡಿ ಕ್ಹುನರವರ ಮುಂದಾಳತ್ವದಲ್ಲಿ , ದಿವ್ಯ ಬಲಿ ಪೂಜೆ ನಡೆಯಿತು.

ಚರ್ಚ್ ನ ಸಭಭವನದಲ್ಲಿ ಸಂಘಟನೆಯ ಸ್ತ್ರೀಯರಿಗಾಗಿ ಗಿಡಮೂಲಿಕೆ ಆಯುರ್ವೆದ ಸಸ್ಯಗಳ ಸ್ಪರ್ಧೆಯನ್ನು ಎರ್ಪಡಿಸಲಾಗಿತ್ತು.  ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಅತೀ ವಂದನೀಯ ಫಾ.ಮಾರ್ಕ್ ಡಿಸೋಜಾ, ಮುಖ್ಯ ಅತಿಥಿಯಾಗಿ ಅತೀ ವಂದನೀಯ ಫಾ. ತಿಯೊದೊರಾ ಡಿ ಕ್ಹುನ ಹಾಗೂ ಅತೀ ವಂದನೀಯ ಫಾ.ಗಿಲ್ಬರ್ಟ್ ಮಸ್ಕರೇನ್ಹಸ್  ಸಂಪನ್ಮೂಲ ವ್ಯಕ್ತಿಯಾಗಿ ಭಗಿನಿ ಆಗ್ನೇಸ್ ಫ್ರ್ಯಾಂಕ್ (ಬೆಥನಿ) ಹಾಜರಿದ್ದರು.

ಚರ್ಚ್ ಪಾಲನಾ ಸಮಿತಿಯ ಉಪಧ್ಯಾಕ್ಷರಾದ ನವಿನ್ ಮಿನೇಜಸ್ ಕಾರ್ಯದರ್ಶಿಯವರಾದ ಹಿಲ್ಡಾ ಪಿರೇರ ಆಯೋಗ ಸಂಯೋಜಕೀಯವರಾದ ಸುನಿತಾ ರೊಡ್ರಿಗಸ್, ಹಿರಿಯ ವ್ಯಕ್ತಿ ಲಿಯೊ ಮಿನೇಜಸ್,ಸಂಘಟನೆ ಅಧ್ಯಕ್ಷೆ  ಐರಿನ್ ಯಂ.ಡಿ ಸೋಜ. ಕಾರ್ಯದರ್ಶಿ ಜೋಯ್ಸ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತಿದ್ದರು.

ಸಂಘಟನೆ ಕಾರ್ಯದರ್ಶಿ ಎಲ್ಲರನ್ನು ಸ್ವಾಗತಿಸಿ, ಅಧ್ಯಕ್ಷೆ ಧನ್ಯಾವಾದವಿತ್ತರು. ಸುನಿತಾ ಬ್ಯಾಪ್ಟಿಸ್ಟ್ , ಜ್ಯೋತಿ ಸಿಕ್ವೇರ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ಸಂಘಟನೆಯ ಸದಸ್ಯರು ತಾವೇ ತಯಾರಿಸಿದ ಮಳೆಗಾಲದ ಖಾದ್ಯಗಳೊಂದಿಗೆ ಆಟಿಯ ಸಂಭ್ರಮ ಹಾಗೂ ಹಿರಿಯರ  ದಿನಾಚರಣೆ ಯಶಸ್ವಿಯಾಗಿ ನಡೆಯಿತು.