ಬರಡುನಾಡು ಬಿಸಿಲಬೀಡೆಂಬ 

ಹಣೆಪಟ್ಟಿಯಿಂದ ಮೈದೆಡವಿ

ಶೃಂಗಾರವೇರಿದ ಶತಶೃಂಗ


ಮಳೆರಾಯ ಮಿಲನದಿಂದ

ಮನದ ಭಾವನೆಯ ಕೆಣಕಿ

ಮೋಹಗೊಳಿಸಿದೆ ಅಂತರಗಂಗಾ


ಸುಕ್ಕುಗಟ್ಟಿ ಶಪಿಸುತಿದ್ದ 

ಮೊಗಕ್ಕೂ ಸಂತೃಪ್ತಿಯ 

ಸಂಭ್ರಮ ತಂದ ಶತಶೃಂಗ 


ಚಿನ್ನದ ನಾಡೆಂಬ ಹಿರಿಮೆಯೊಂದಿಗೆ

ಹಚ್ಚ ಹಸಿರ ಬೀಡೆಂಬ ಗರಿಮೆಗೆ

ಕಾತರಿಸಿದೆ ಅಂತರಗಂಗಾ 


ಕೃಷಿಕರಿಗೆ ಖುಷಿಯನಿತ್ತು

ಪ್ರವಾಸಿಗರ ಚಾರಣಿಗರ 

ಕೈಬೀಸಿ ಕರೆಯುತಿದೆ ಶತಶೃಂಗ 


ಬೆಳಗಿನ ರವಿಯ ಹೊಂಬೆಳಕು

ಸಂಜೆ ವರುಣನ ವೈಭವದಿಂದ

ಭಾವಕ್ಕೆ ಬಣ್ಣವೇರಿಸುತಿದೆ ಅಂತರಗಂಗಾ


-    ಮಾಗಿದ ಮನಸ್ಸು