ಬದುಕಿ ಬಿಡಬೇಕು
ಕೆಲವೊಮ್ಮೆ ಬೇಡವೆಂದರೂ
ಜನರು ಜರಿದರೂ
ಬದುಕಿ ಬಿಡಬೇಕು
ಭರವಸೆ ಹುಸಿಯಾದರೂ
ಸಂತಸವೇ ಸುಳ್ಳಾದರೂ
ಬದುಕಿ ಬಿಡಬೇಕು
ತೊರೆದವರ ತುಳಿಯಲು
ಅಣಿಕಿಸಿದವರ ಅಳಿಸಲು
ಬದುಕಿ ಬಿಡಬೇಕು
ಕಷ್ಟಗಳಿಗೆ ಜಿಗುಪ್ಸೆ ತರಲು
ನಷ್ಟಗಳ ನಿಷ್ಕ್ರಿಯಗೊಳಿಸಲು
ಬದುಕಿ ಬಿಡಬೇಕು
ಸಾಧನೆಯ ಸವಿ ಸವೆಯಲು
ಸೋತವರಿಗೆ ಸ್ಫೂರ್ತಿಯಾಗಲು
ಬದುಕಿ ಬಿಡಬೇಕು
ಭಾವನೆಗಳಿಗೆ ಬೆಳಕು ಚೆಲ್ಲಲು
ಜೀವನವ ಜಯಿಸಲು
ಬದುಕಿ ಬಿಡಬೇಕು
ಬೇಡವೆಂದರೂ ಬೇಕಾದರೂ
ಬದುಕಿಗೆ ಸಾರ್ಥಕತೆಯ ತುಂಬಲು
- (Pavitra)ಮಾಗಿದ ಮನಸ್ಸು