ಬಂಟ್ವಾಳ, ಸಿದ್ದಕಟ್ಟೆ:  ನವೆಂಬರ್ 14 ರಂದು ವಿದ್ಯಾಸಂಸ್ಥೆಯಲ್ಲಿ ಎಂದಿನಂತೆ ದೈನಂದಿನದ ಪ್ರಾರ್ಥನೆಯನ್ನು ಶಿಕ್ಷಕ ಬಳಗದವರು ನಡೆಸಿ ನಂತರ ತರಗತಿವಾರು ಲಕ್ಕಿ ಆಟ ಆಡಿಸಿ ಸರಿಯಾಗಿ 11 ಗಂಟೆಗೆ ಸಭಾ ಕಾರ್ಯಕ್ರಮ. ಮೊದಲಿಗೆ ಶಿಕ್ಷಕರಿಂದ ಪ್ರಾರ್ಥನೆ ನಂತರ, ಧನ್ಯ ಸಭಾಂಗಣದಲ್ಲಿ ಆಸಿನರಾಗಿರುವ ಪ್ರಾಚಾರ್ಯರಾದ ರಮ್ಯಾ, ಮುಕ್ಯೋಪಾಧ್ಯಾಯನಿ ಜಯಶ್ರೀ ಹಾಗೂ ಶಾಲೆಯ ನಾಯಕ ಯಶಸ್ ಉಪನಾಯಕ ಅನುಷ್. ಪದವಿ ಪೂರ್ವ ಕಾಲೇಜು ನ ಅಧ್ಯಕ್ಷ ದೀಕ್ಷಿತ್ ಉಪ ಅಧ್ಯಕ್ಷಿ ಇವರೆಲರಿಗೂ ಹೂವನ್ನು ಕೊಟ್ಟು ಸ್ವಾಗತಿಸಿದರು.

ನಂತರ ದೀಪವನ್ನು ಬೆಳಗಿಸಿದರು. ಜವಾಹಾರಲಾಲ್ ನೆಹರು ಇವರ ಭಾವ ಚಿತ್ರಕ್ಕೆ ಮಕ್ಕಳ ದಿನದ ಸಂಕೇತವಾಗಿ ಹೂ ವನ್ನು ಅರ್ಪಿಸಿ ಅವರಿಗೆ ಗೌರವ ಸಲ್ಲಿಸಿ, ಮುಕ್ಯೋಪಾಧ್ಯಾಯನಿ ಮಕ್ಕಳಿಗೆ ಹಿತನುಡಿ ನುಡಿದರು, ನಂತರ  ಶಿಕ್ಷಕ ಬಳಗದಿಂದ ಶುಭಾಶಯ ಗೀತೆ ಹಾಡಿ ಮಕ್ಕಳನ್ನು ರಂಜಿಸಿದರು. ಕೊನೆಯದಾಗಿ ಧನ್ಯವಾದ ಅರ್ಪಿಸಿ ಕಾರ್ಯಕ್ರಮವನ್ನು ಕೊನೆಗೂಲಿಸಿದರು. ಹಾಗೂ ಆ ದಿನ ಶಾಲೆಯ ಎಲ್ಲಾ ಮಕ್ಕಳಿಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.