ಬಂಟ್ವಾಳ, ಜೂನ್ 03: ಗುಣಶ್ರೀ ವಿದ್ಯಾಲಯದ ಪ್ರಾರಂಭೋತ್ಸವ ಇಂದು ಬೆಳಿಗ್ಗೆ ಶಾಲಾ ಆವರಣದಲ್ಲಿ ಹೊಸ ಮಕಳನ್ನು ಮೆರವಣಿಗೆಯ ಮುಖಂತರ ಕಲಶ ಮತ್ತು ಬ್ಯಾಂಡ್ ವಾದ್ಯದೊಂದಿಗೆ ಸಭಾ ವೇದಿಕೆಗೆ ಕರೆತರಲಾಯಿತು. ಅದರೊಂದಿಗೆ ಶಿಕ್ಷಕರು ಮಕ್ಕಳಿಗೆ ಆರತಿ ಮತ್ತು ಹೂ ದಳಗಳನ್ನು ಹಾಕುವ ಮೂಲಕ ಸ್ವಾಗತಿಸಿದರು. ತಳಿರು ತೋರಣದೊಂದಿಗೆ ಶಾಲೆಯನ್ನು ಸಜ್ಜು ಗೊಳಿಸಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ಶುಭಲಕ್ಷ್ಮಿ ನಿರೂಪಕಿಯಾಗಿ, ಅಥಿಗಳನ್ನು ವೇದಿಕೆಗೆ ಅವ್ಹಾನಿಸಿದರು. ವೇದಿಕೆಯಲ್ಲಿ ಶಾಲೆಯ ಸಂಚಾಲಕರಾದ ವಿಜಯ ಕುಮಾರ್ ಚೌಟ, ಆಡಳಿತ ಅಧಿಕಾರಿ ಪೂಜಾ ಹಾಗೂ ಶಿಕ್ಷಕಿ ಅನುಷ ಅವರು ಉಪಸಿತರಿದ್ದರು. ಹತ್ತನೇ ತರಗತಿಯ ಪ್ರಾರ್ಥನಾ ಹಾಗೂ ಸಾನಿದ್ಯಾ ಪ್ರಾರ್ಥನೆ ಗೀತೆ ಹಾಡಿದರು.  ಹೊಸ ಮಕ್ಕಳು ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಿಸಿದರು.

ಶಿಕ್ಷಕಿ  ಭವ್ಯ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಸಂಚಾಲಕರು ಮಕ್ಕಳಿಗೆ ಹಿತನುಡಿಗಳನ್ನು ತಿಳಿಸಿಕೊಟ್ಟರು.  ಪೂಜಾ ಅವರು ಮಕ್ಕಳಿಗೆ ಶಿಸ್ತು ಮತ್ತು ಸ್ವಚ್ಛತೆಯ ಬಗ್ಗೆ ಕಿವಿ ಮಾತನ್ನು ಹೇಳಿದರು. ಶಾಲಾ ಅಧ್ಯಕ್ಷರಾದ ಶ್ರೀ ಬಿ ನಾಗರಾಜ್ ಶೆಟ್ಟಿ  ಮತ್ತು ಮುಖ್ಯ ಶಿಕ್ಷಕಿ ಜಯಶ್ರೀ ರವರ ಅನುಪಸ್ಥಿತಿಯಲ್ಲಿ ಮಕ್ಕಳಿಗೆ ಶುಭಾ ಹಾರೈಕೆ ನೀಡಿದರು. ಮದ್ಯಾಹ್ನ ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೊನೆಯದಾಗಿ ಶಿಕ್ಷಕಿ ತುಳಸಿ ಅವರು ಧನ್ಯವಾದ ಸಮರ್ಪಣೆಯನ್ನು ಅರ್ಪಿಸಿದರು.