ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಫಾದರ್ ಸ್ಟ್ಯಾನ್ ಸ್ವಾಮಿ‌ ಬಂಧನದಲ್ಲಿರುವಾಗಲೇ 84ರ ಪ್ರಾಯದಲ್ಲಿ ಸಾವು ಕಂಡಿರುವುದು ಸಾಂಸ್ಥಿಕ ಕೊಲೆ ಎಂದು ಎಲ್ಗಾರ್ ಪರಿಷತ್ ಆಪಾದಿಸಿದೆ.

ವಿಚಾರವಾದಿಗಳೆಲ್ಲರೂ ಈ ಸಾವನ್ನು ಆಡಳಿತ ವ್ಯವಸ್ಥೆಯ‌ ವೈಫಲ್ಯ ಇಲ್ಲವೇ ಬೇಕೆಂದೇ ಅಸಡ್ಡೆ ತೋರಿಸಿ ಸಾಯಲು ಬಿಟ್ಟದ್ದು ಎಂದಿದ್ದಾರೆ. ಅವರಿಗೆ ಜಾಮೀನು ನೀಡದೆ, ಚಿಕಿತ್ಸೆಯನ್ನೂ ಸರಿಯಾಗಿ ನೀಡದೆ ಕೇಂದ್ರ ಸರಕಾರ‌ ತನ್ನ ಆಟದಲ್ಲಿ ಗೆದ್ದಿದೆ ಎಂದು ಎಡ ವಿಚಾರ ಧಾರೆಯವರೆಲ್ಲರೂ ಆಪಾದಿಸಿದ್ದಾರೆ.