ರಶಿಯಾದ ಪ್ರಯಾಣಿಕರ ವಿಮಾನವೊಂದು 28 ಜನರ ಸಹಿತ ನಿಗೂಢವಾಗಿ ಕಣ್ಮರೆಯಾದದ್ದರ ಅವಶೇಷಗಳು ಒಕೋಸ್ಕ್ ಕಡಲ ತೀರದ ವಿಮಾನ ನಿಲ್ದಾಣದಿಂದ ಅಯ್ದು ಕಿಮೀ ದೂರದಲ್ಲಿ ಪತ್ತೆಯಾಗಿದೆ. ಅದರಲ್ಲಿದ್ದ ಎಲ್ಲರೂ ಮೃತ್ಯು ಅಪ್ಪಿದ್ದಾರೆ.
ಭೂಮಿಗೆ ಇಳಿಯುವ ಹಂತದಲ್ಲಿ ಈ ವಿಮಾನವು ವಾಯು ಸಂಚಾರ ನಿಯಂತ್ರಣ ಗೋಪುರದ ಸಂಪರ್ಕದಿಂದ ಒಮ್ಮೆಗೇ ಮರೆಯಾಗಿ ಹೋಗಿತ್ತು. ಪೆಟ್ರೋಪವ್ಲೋವಸ್ಕ್‌ನ ಕಮ್ಚತಾಸ್ತ್‌ನಿಂದ ಕಮ್ಚಾಟ್ಸ್ಕಿಯ ಪಲಾನಾಕ್ಕೆ ವಿಮಾನ ಹೋಗುತ್ತಿತ್ತು.