ಮೂಡುಬಿದಿರೆ ತಾಲೂಕಿನ ಪೆರಿಬೆಟ್ಟು ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಹಿತಿ ನೀಡಲಾಯಿತು. ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೆಲಮಟ್ಟದಲ್ಲಿಯೇ ತರಗತಿಗಳನ್ನು ಹೊಂದಿರಬೇಕು. 

ಒಂದು ವೇಳೆ ಅನಿವಾರ್ಯವಾಗಿ ಸ್ಥಳಾವಕಾಶದ ಕೊರತೆಯಿದ್ದರೆ ಪ್ರತೀ ದಿಕ್ಕಿನ ಮಹಡಿಯ ಎರಡೂ ಬದಿಗಳಲ್ಲಿ ಕನಿಷ್ಠ ಹತ್ತು ಫೀಟ್ ಅಗಲದ ಮೆಟ್ಟಿಲುಗಳು ಇರಲೇಬೇಕು. ಮಹಡಿಯ ಕಟ್ಟಡದ ಪ್ರತೀ ಹಂತದಲ್ಲೂ, ಪ್ರತೀ ತರಗತಿಯಲ್ಲೂ ಅಗ್ನಿನಂದಕ ಇರತಕ್ಕದ್ದು. ಬಿಸಿ ಊಟದ ತಯಾರಿ ಶಾಲೆಯಲ್ಲಿ ನಡೆಯುತ್ತಿರುವದೇ ಈ ಆದೇಶಕ್ಕೆ ಕಾರಣ. ಶಾಲೆಯ ಕುಡಿಯುವ ನೀರಿನ ತೊಟ್ಟಿ ಕೂಡಾ ಪ್ರತೀ ಹದಿನೈದು ದಿನಕ್ಕೊಮ್ಮೆ ಶುದ್ಧಗೊಳಿಸಿ ಒದಗಿಸುವಂತೆ ಆರೋಗ್ಯ ಕಾರ್ಯಕರ್ತರು, ಹೆತ್ತವರು, ಬಿಸಿ ಊಟದ ನಿರ್ವಾಹಕರು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.

ಇದೆಲ್ಲಾ ಸಮರ್ಪಕವಾಗಿ ನಡೆಯುತ್ತಿರುವ ಬಗ್ಗೆ ವಿದ್ಯಾರ್ಥಿ ಸಂಘವೂ ಎಚ್ಚರಿಕೆಯಿಂದ ಗಮನಿಸುವುದು ಒಳ್ಳೆಯದು. ಏಕೆಂದರೆ ಪ್ರತೀ ವಿದ್ಯಾರ್ಥಿಯ ಆರೋಗ್ಯ ಅತ್ಯಮೂಲ್ಯವಾದುದು ಎಂದು ನೆನಪು ಮಾಡಿಕೊಟ್ಟರು. ಗ್ರಾಮೀಣ ಕೃಪಾಂಕ, ಕನ್ನಡ ಮಾಧ್ಯಮದ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಿ ಎಂದು ತಿಳಿಸಿದರು. ಶಾಲಾ ಶಿಕ್ಷಕ ಪ್ರಸನ್ನ ಸ್ವಾಗತಿಸಿದರು. ಶಿಕ್ಷಕ ರಂಗಣ್ಣ, ಶಿಕ್ಷಕಿ ವಿನಯ, ಸ್ಮಿತಾ ಕಾರ್ಯಕ್ರಮ ಸಂಘಟಿಸಿದ್ದರು. ಮುಖ್ಯ ಶಿಕ್ಷಕ ರಾಜೇಂದ್ರ ವಂದಿಸಿದರು.