ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿರ್ಲೆ ನೀರ್ಬೀಳು ನೋಡಲು ನಿನ್ನೆ ಸಂಜೆ ಹುಬ್ಬಳ್ಳಿ ಕಡೆಯಿಂದ ಬಂದಿದ್ದ ಆರು ಜನರು ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ.
ಮೂರು ಬೈಕ್‌ಗಳಲ್ಲಿ ಬಂದ ತರುಣ ತರುಣಿಯರು ಜಲಪಾತದತ್ತ ಬೈಕ್‌ಗಳನ್ನು ಊರಿನಲ್ಲಿ ಬಿಟ್ಟು ನಡೆದು ಹೋಗಿದ್ದಾರೆ. ಹಳ್ಳ ದಾಟಲು ಮಾಡಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿರುವುದರಿಂದ ಅವರು ಹಳ್ಳ ದಾಟಿ ನೀರ್ಬೀಳು ನೋಡಲು ಹೋಗಲು ಸಾಧ್ಯವಿಲ್ಲ.
ಸಹಾಯಕ ಅರಣ್ಯಾಧಿಕಾರಿ ಹಿಮವತಿ ಭಟ್ಟ ಅವರ ಪ್ರಕಾರ ತುಂಬಿ ಹರಿಯುವ ಹಳ್ಳ ದಾಟಲು ಪ್ರಯತ್ನಿಸಿರಲಾರರು. ಕಾಡಿನಲ್ಲಿ ದಾರಿ ತಪ್ಪಿರಬೇಕು. ಹುಡುಕಾಟ ನಡೆದಿದೆ ಎಂದಿದ್ದಾರೆ.