ಮುಳ್ಳಿನ ಗಿಡದ ಬೀಜವನ್ನು ಬಿತ್ತಿ ಗುಲಾಬಿ ಹೂವನ್ನು ನಿರೀಕ್ಷಿಸುವದು ಎಂದಾದರು ಸಾಧ್ಯವೇ? ಖಂಡಿತ ಇಲ್ಲಾ ಆಲದ ಮರದ ಬೀಜದಿಂದ ಆಲದ ಮರವೇ ಮೊಳಕೆಯೋಡದಿತೇ ಹೊರತು ಮಾವಿನ ಗಿಡವಲ್ಲ ಪ್ರಕೃತಿಯ ಈ ನಿಯಮವೇ ನಮ್ಮ ಈ ಬದುಕಿಗೂ ಅನ್ವಯವಾಗುತ್ತದೆ.

ನನ್ನ ನೆಚ್ಚಿನ ಓದುಗರೇ ಈ ಮೇಲಿನ ವಾಕ್ಯಗಳು ಇನ್ನು ಚನ್ನಾಗಿ ಅರ್ಥವಾಗಲು ನಾನು ನಿಮಗೆ ಒಂದು ಅದ್ಬುತ ಕಥೆಯನ್ನ ಹೇಳುತ್ತೇನೆ ಕೇಳಿ..

ಒಂದು ಹಳ್ಳಿಯಲ್ಲಿ ಒಬ್ಬ ಪೂರ್ತಿ ಬಡ ರೈತನಿದ್ದ ಅವನ ಹತ್ತಿರ ಏನು ಇರಲಿಲ್ಲ ಹೀಗೆ ಇರುವಾಗ ಆ ರೈತ ಆ ಊರಿನ ಶ್ರೀಮಂತ ಜಮೀನ್ದಾರರ ಹತ್ತಿರ ಹೋಗುತ್ತಾನೆ. ಹೋಗಿ ಅವರ ಮುಂದೆ ಕೈಚಾಚಿ ನಿಂತು ಧಣಿಗಳೇ ನನ್ನ ಹತ್ತಿರ ಏನು ಇಲ್ಲಾ ಆದ ಕಾರಣ ತಾವು ನನಗೆ ಒಂದು ವರ್ಷದ ಕಾಲ ಸ್ವಲ್ಪ ಜಮೀನು ಕೊಟ್ಟರೆ ನಾನು ಒಂದು ವರ್ಷದಲ್ಲಿ ಆ ಜಮೀನಿನಲ್ಲಿ ಚನ್ನಾಗಿ ಕಷ್ಟಪಟ್ಟು ದುಡಿದು ಬಂದ ಲಾಭದಲ್ಲಿ ನಿಮ್ಮದೇನಿದೆಯೋ ಅದನ್ನ ಕೊಟ್ಟು ನನ್ನ ಜೀವನಕ್ಕೆ ಒಂದು ದಾರಿ ಮಾಡಿಕೊಳ್ಳೋತ್ತೇನೆ ಎಂದು ಕೇಳಿಕೊಳ್ಳುತ್ತಾನೆ. ಆಗ ಆ ಜಮೀನ್ದಾರರು ಅವನ ಮಾತನ್ನು ಒಪ್ಪಿ ಅವನಿಗೆ ಒಂದು ವರ್ಷದ ಕಾಲ ದುಡಿಯಲು ಸ್ವಲ್ಪ ಜಮೀನು ಅವನಿಗೆ ನೀಡುತ್ತಾರೆ ಹಾಗೂ ಆ ಜಮೀನಿನ ಜೊತೆಗೆ ಅವನ ಸಹಾಯಕ್ಕೆ ತನ್ನ ಕಡೆಯಿಂದ 5 ಜನರನ್ನು ಸಹ ಕಳಿಸುತ್ತಾರೆ. ಅವನು ಹೋಗಿ ಅವನ ಜಮೀನಿನಲ್ಲಿ ತುಂಬಾ ಚನ್ನಾಗಿ ಕಷ್ಟಪಟ್ಟು ಆ 5 ಜನರ ಜೊತೆ ಕೆಲಸ ಮಾಡುತ್ತಾನೆ. ಸ್ವಲ್ಪ ದಿನ ಹೋದಂತೆ ಅಲ್ಪಪ್ರಮಾಣದಲ್ಲಿ ಅವನಿಗೆ ಬೆಳೆ ಚನ್ನಾಗಿ ಬರುವ ಅನುಭವ ಆದ ಮೇಲೆ ಅವನು ತಾನು ಕೆಲಸ ಮಾಡುವದನ್ನ ಪೂರ್ತಿ ಬಿಟ್ಟು ಬಂದ ಆ 5 ಜನರನ್ನು ನಂಬಿ ಅವರನ್ನ ಎಲ್ಲಾ ಕಾರ್ಯ ಅವರ ಮೇಲೆ ಹಾಕಿ ತಾನು ಆರಾಮಾಗಿ ಇರಲು ಆರಂಭಿಸುತ್ತಾನೆ.

ಹೀಗೆ ಕಾಲ ಕಳೆದು ಹೋಗುತ್ತದೆ ವರ್ಷದ ಆ ಕೊನೆಯ ದಿನ ಬರುತ್ತದೆ ಆದರೆ ಬೆಳೆಯಲ್ಲ ಹಾಳಾಗಿ ಕೊಳೆತು ಹೋಗಿ ಯಾವದೇ ಉಪಯೋಗಕ್ಕೂ ಬರದ ಹಾಗೆ ಆಗಿ ಬಿಡುತ್ತದೆ. ಅದನ್ನ ನೋಡಿ ಅವನು ತಾನು ಮಾಡಿದ ತಪ್ಪಿನ ಅರಿವಾಗಿ ಮತ್ತೇ ಓಡೋಡಿ ನೇರವಾಗಿ ಆ ಶ್ರೀಮಂತ ಜಮೀನ್ದಾರರ ಹತ್ತಿರ ಹೋಗಿ ಸ್ವಾಮಿ ಧಣಿಗಳೇ ನನ್ನನ್ನು ಕ್ಷಮಿಸಿ ನನ್ನಿಂದ ದೊಡ್ಡ ತಪ್ಪಾಯ್ತು ನೀವು ನನಗೆ ಕೊಟ್ಟ ಜಮೀನಿನಲ್ಲಿ ನಾನು ಕಷ್ಟಪಟ್ಟು ಈ 5ಜನರನ್ನು ಸರಿಯಾಗಿ ಮಾರ್ಗದರ್ಶನ ಮಾಡಿ ಕೆಲಸ ಮಾಡಬೇಕಿತ್ತು ಆದರೆ ನಾನು ಸ್ವಲ್ಪ ದಿನ ಕಾಲ ಹಾಗೆ ಮಾಡಿ ತದನಂತರ ಎಲ್ಲಾ ಕಾರ್ಯ ಈ 5 ಜನರ ಮೇಲೆ ಹಾಕಿ ನಾನು ತಪ್ಪು ಮಾಡಿದ ಪರಿಣಾಮ ಇವತ್ತು ನನ್ನ ವರ್ಷದ ಫಲ ಸಂಪೂರ್ಣವಾಗಿ ಹಾಳಾಗಿಹೋಗಿದೆ ಎಂದು ಅಳುತ್ತಾನೆ ಆಮೇಲೆ ನನಗೆ ಮತ್ತೊಂದು ಕೊನೆಯ ಅವಕಾಶ ಕೊಡಿ ಎಂದು ಗೊಗೋರಿಯುತ್ತಾನೆ ಆದರೆ ಜಮೀನ್ದಾರರು ಅದಕ್ಕೆ ಅವಕಾಶ ಕೊಡುವದಿಲ್ಲ. ಬದಲಾಗಿ ಅವರು ಹೇಳುತ್ತಾರೆ ನೋಡು ನನ್ನ ಹತ್ತಿರ ಸಹಾಯ ಕೇಳಿ ಬಂದವರಿಗೆ ನಾನು ಕೇವಲ ಒಂದೇ ಸಲ ಅವಕಾಶ ಕೊಡುವದು ಅದನ್ನ ಅವರು ಸರಿಯಾಗಿ ಉಪಯೋಗಿಸಿಕೊಂಡಿದ್ದೆ ಆದರೆ ಅವರಿಗೆ ಮುಂದಿನ ಸಹಾಯ ಮಾಡಬಲ್ಲೆ ಆದರೆ ಅದರ ಉಪಯೋಗ ಸರಿಯಾಗಿ ತೆಗೆದುಕೊಳ್ಳದವರಿಗೆ ನಾನು ಮತ್ತೇ ಅವಕಾಶ ಕೊಡುವದಿಲ್ಲ ಹೋಗು ಎಂದು ಹೇಳುತ್ತಾರೆ.

ಪ್ರಿಯ ಓದುಗರೇ ಈ ಕಥೆ ನಿಮಗೆ  ಇನ್ನು ಚನ್ನಾಗಿ ಅರ್ಥವಾಗಬೇಕಾದರೆ ಈ ಕಥೆಯ ನಿಜವಾದ  ಪಾತ್ರ ಪರಿಚಯ ಬಹಳ ಮುಖ್ಯ ಅದನ್ನ ನೋಡಿ

  ಪಾತ್ರ ಪರಿಚಯ

ಜಮೀನ್ದಾರರು - ದೇವರು

ರೈತ ವ್ಯಕ್ತಿ  - ಆತ್ಮ

ಅಲ್ಪ ಜಮೀನು - ನಮ್ಮ ದೇಹ

ಆ 5 ಜನ - ನಮ್ಮ ಪಂಚೆದ್ರೀಯಗಳು (ಕಣ್ಣು.. ಕಿವಿ.. ಮೂಗು.. ನಾಲಿಗೆ.. ಚರ್ಮ..)

ಅರ್ಥವಾಯಿತಾ ಓದುಗರೇ, ಇದರ ಸಾರ ಇಷ್ಟೇ ಭಗವಂತ ನಮಗೆ ಈ ಜೀವನ  ಒಂದೇ ಸಲ ಕೊಡುವದು ನಮ್ಮ ಆತ್ಮಕ್ಕೆ ಸಾವಿಲ್ಲ ಆತ್ಮ ದೇಹಗಳನ್ನ ಬಟ್ಟೆ ಹಾಗೆ ಬದಲಾಯಿಸುತ್ತ ಹೋಗುತ್ತೆ. ಭಗವಂತ ನಮಗೆ ಅಂತ ಕೊಟ್ಟಿರೋ ಮನುಷ್ಯ ಜನ್ಮವನ್ನು ನಾವು ನಮ್ಮ ಪಂಚೆದ್ರೀಯಗಳನ್ನು ನಮ್ಮ ಹತೋಟಿಯಲ್ಲಿ ಇಟ್ಟಿಕೊಂಡು ಒಂದು ಮಾದರಿ ಜೀವನವನ್ನು ಮಾಡಬೇಕು ಆವಾಗ್ಲೇ ನಮ್ಮ ಈ ಜೀವನಕ್ಕೆ ಒಂದು ಅರ್ಥ.. ನಾವು ಜೀವನದಲ್ಲಿ ಮಾಡಬಾರದ ಕಾರ್ಯಗಳನ್ನು ಮಾಡಿ ಸಾಯುವ ಕೊನೆಯ ಹಂತದಲ್ಲಿ ಅರಿವಾಗಿ ಭಗವಂತನಿಗೆ ಮತ್ತೊಂದು ಅವಕಾಶ ಕೊಡಿ ಎಂದರೆ ಅದು ಅಸಾಧ್ಯ. ಅದಕ್ಕೆ ನಮ್ಮ ವಿಚಾರಗಳು ಕಾರ್ಯಗಳು ಯಾವತ್ತೂ ಒಬ್ಬರಿಗೆ ಮಾದರಿಯಾಗಿ ಇರಬೇಕು..

ನಾವು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ದಾರಿಯಲ್ಲಿ ಅಕ್ಕ ಪಕ್ಕ ನೋಡುವಾಗ ಕೆಲವು ಹೊಲದಲ್ಲಿ ಒಳ್ಳೆ ಬೆಳೆ ಬೆಳೆದಿರೋ ದೃಶ್ಯ ಕಾಣುತ್ತೆ ಮತ್ತೇ ಕೆಲವು ಹೊಲದಲ್ಲಿ ಕಲ್ಲು ಕಡಿ ಉಪಯೋಗವಿಲ್ಲದ ಮುಳ್ಳಿನ ಗಿಡಗಳು ಬೆಳೆದಿರೋದು ನಮಗೆ ಕಾಣುತ್ತದೆ. ಯಾವ ವ್ಯಕ್ತಿ ಪ್ರಾಮಾಣಿಕವಾಗಿ ಇದ್ದು ತನ್ನ ಹೊಲದಲ್ಲಿ ಒಳ್ಳೆ ಬೆಳೆ ಬಿತ್ತಿದರೆ ಅವನಿಗೆ ಅದರ ಫಲವಾಗಿ ಒಳ್ಳೆ ಬೆಳೆ ಸಿಗುತ್ತದೆ.. ಯಾವ ವ್ಯಕ್ತಿ ಪ್ರಾಮಾಣಿಕವಿಲ್ಲದೆ ತನ್ನ ಕಾರ್ಯ ಬೇರೆ ವ್ಯಕ್ತಿ ಮೇಲೆ ಹಾಕಿ ಇರುತ್ತನೋ ಉಪಯೋಗ ವಿಲ್ಲದ ವಿಚಾರಗಳನ್ನು ಮಾಡುತ್ತ ಕುರುತ್ತಾನೋ ಅವನ ಹೊಲದಲ್ಲಿ ಏನು ಬೆಳೆಯೋದಿಲ್ಲ... ಅದಕ್ಕೆ ಹೇಳೋದು...

"ಬಿತ್ತಿದಂತೆ ಬೆಳೆ ಸುಳ್ಳಲ್ಲ"  ಅಂತ.

Article by


ನವೀನ ಗೋಪಾಲಸಾ ಹಬೀಬ( M. A B. Ed )