ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಜನಸಾಮಾನ್ಯರು ಬಡವರಿಗೆ ಜಾತ್ಯತೀತವಾಗಿ ವಿದ್ಯೆ ಸಿಗಬೇಕೆಂಬ ನಮ್ಮ ಸಂಸ್ಥೆಯ ಸದಾಶಯ ಹಸನಾಗಲಿ ಆ ಮೂಲಕ ರಾಷ್ಟ್ರನಿರ್ಮಾಣವಾಗಲಿ ಎಂದು ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಹಾರೈಸಿದರು.

ಸಂಚಾಲಕರಾದ ರಾಮನಾಥ ಭಟ್ಟ ಪಥಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ  ಪುಷ್ಪರಾಜ್ ಇವರು ಕ್ರೀಡಾಜ್ಯೋತಿ ಬೆಳಗಿಸಿದರು.

ಹಳೆವಿದ್ಯಾರ್ಥಿ ನಿವೃತ್ತ ಉದ್ಯೋಗಿ  ದಾಮೋದರ್ ಆಚಾರ್ಯ  ಶಾಲಾ ಹಳೆವಿದ್ಯಾರ್ಥಿ ರಾಘವೇಂದ್ರ ಉಪಸ್ಥಿತರಿದ್ದರು. ಎಂ ಕೆ ಅನಂತ್ರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮುಖ್ಯೋಪಾಧ್ಯಾಯಿನಿ ತೆರಸಾ ಕರ್ಡೋಜಾ ಸ್ವಾಗತಿಸಿದರು. ವೆಂಕಟರಮಣ ಕೆರೆಗದ್ದೆ ಧನ್ಯವಾದ ಹೇಳಿದರು. ಭರತ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕ್ಲೆಮೆಂಟ್ ಡಿಸೋಜ ಸಂಪೂರ್ಣ ಕ್ರೀಡೋತ್ಸವದ ಉಸ್ತುವಾರಿ ವಹಿಸಿದ್ದರು.