ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀಕಾಲೇಜು, ವಿದ್ಯಾಗಿರಿ, ಬಂಟ್ವಾಳ ಇದರ ಪ್ರಾಂಶುಪಾಲರಾಗಿ ಕವಿ, ಸಾಹಿತಿ, ನಾಟಕ ಬರಹಗಾರರಾದ ಎಂ.ಡಿ. ಮಂಚಿ ಇತ್ತೀಚಿಗೆ ನಿಯುಕ್ತಿಗೊಂಡರು. ಇವರನ್ನು ಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಕೆ. ರೇಖಾ ಶೆಣೈ, ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ ಹಾಗೂ ಪ್ರಾಧ್ಯಾಪಕ ವೃಂದದವರು ಅಭಿನಂದಿಸಿದರು.