ಮೂಡುಬಿದಿರೆ: ಪ್ರಾಚೀನ ಭಾರತದ ಪವಿತ್ರ ನಗರ ಕಾಶಿರಾಜ ವಿಶ್ವ ಸೇನ ವಾಮದೇವಿ ಪುತ್ರ ಕುಮಾರನಾಗಿದ್ದ ಪಾರ್ಶ್ಶ್ವಕುಮಾರ ವೈರಾಗ್ಯ ಪಡೆದು ಕಠಿಣ ತಪಗೈದು ಭಗವಾನ್ ಪಾರ್ಶ್ಶ್ವನಾಥರಾದರು.  ಭಗವಾನ್ ಮಹಾವೀರರಿಗಿಂತ ಪೂರ್ವಕ್ಕೆ 250 ವರ್ಷ ಮೊದಲು ಶಾಶ್ವತ ಸಿದ್ದ ಕ್ಷೇತ್ರ  ಸಮ್ಮೇದಗಿರಿಯಲ್ಲಿ ನಿರ್ವಾಣ ಪಡೆದವರು ಅವರು ನೂರು ವರ್ಷ ಜೀವಿಸಿದ್ದರು.  ಕ್ರಿ ಪೂ 777 ರಲ್ಲಿ ಮುಕ್ತಿ ಪಡೆದುಕೊಂಡು ಇಂದಿಗೆ 2802 ವರ್ಷ ಆಯಿತು.  ಜೈನಕಾಶಿ ಮೂಡುಬಿದಿರೆಯಲ್ಲಿ ಅವರ ನಿರ್ವಾಣ ಪೂಜೆ ಜೂಲೈ 31 ರಂದು ಪ.ಪೂ ಆಚಾರ್ಯ 108 ಗುಲಾಬ್ ಭೂಷಣ ಪ.ಪೂ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯಮಹಾಸ್ವಾಮೀಜಿ ಮಾರ್ಗದರ್ಶನ ದಿವ್ಯ ಸಾನ್ನಿಧ್ಯದಲ್ಲಿ ನಿರ್ವಾಣ ಲಾಡು ಅರ್ಗ್ಯ ಏರಿಸಿ ಶ್ರೀ ಮಠ ಹಾಗೂ ಗುರುಗಳ ಬಸದಿಯಲ್ಲಿ ವಿಶೇಷ ಅಭಿಷೇಕ ಪೂಜೆ ನೆರವೇರಿತು.

ಸ್ವಾಮೀಜಿ ಆಶೀರ್ವಾದ ಮಾಡಿ ಸತ್ಯ ಅಹಿಂಸೆ ಅಚೌರ್ಯ ಅಪರಿಗ್ರಹ ಎಂಬ ನಾಲ್ಕು ಅಣು ವ್ರತ ಭೋದಿಸಿ ಭಾರತದಾದ್ಯಾoತ  ಲೋಕ ಕಲ್ಯಾಣದ ಉಪದೇಶ ಭೋದಿಸಿದ ಮಹಾಸoಯಮಿ ಪಾರ್ಶ್ಶ್ವನಾಥರು ಉಪಸರ್ಗ ವಿಜೇತ ಎಂದು ಪ್ರಸಿದ್ದರು ಎಂದು ತಿಳಿಸಿ ದರು.  ಈ ಸಂಧರ್ಭ ಅಭಯ ಚಂದ್ರ ಜೈನ್, ಆರತಿ, ದಿವ್ಯಾ ವೀರೇಂದ್ರ, ಸಂಪತ್ ಕುಮಾರ್ ಉಪಸ್ಥಿತರಿದ್ದರು.