ಧರ್ಮಸ್ಥಳ:  ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು ಉರುವಾಲು ಗ್ರಾಮದ ಕೊರಿಂಜಾ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗೆ ಬಿಡುಗಡೆ ಮಾಡಲಾದ ರುಪಾಯಿ ಎರಡು ಲಕ್ಷ ದೇಣಿಗೆ ಹಸ್ತಾಂತರವನ್ನು ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಬದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ದಾಸಪ್ಪ ಗೌಡ, ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ  ಕಡ್ತಿಲ, ಆಡಳಿತ ಮಂಡಳಿಯ ಸದಸ್ಯರಾದ ಶಂಕರನಾರಾಯಣ ಭಟ್, ಜನಾರ್ದನ ಗೌಡ, ಶೇಷಪ್ಪ ರೈ, ಲಿಂಗಪ್ಪ ನಾಯ್ಕ್ಹಹರೀಶ್  ಕುಮಾರ್  ಆರ್ಥಿಕ ಸಮಿತಿಯ ಸಂಚಾಲಕರಾದ ಪ್ರಭಾಕರ ಪಸಂದೊಡಿ ಯೋಜನಾಧಿಕಾರಿಗಳಾದ ದಯಾನಂದ ಪೂಜಾರಿ, ವಲಯ ಮೇಲ್ವಿಚಾರಕರಾದ ಶಿವಾನಂದ, ಸೇವಾಪ್ರತಿನಿಧಿ ಸೀತಾರಾ ಮ್ಮೊದಲಾದವರು ಉಪಸ್ಥಿತರಿದ್ದರು.