ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆಯಲ್ಲಿ ಕಳೆದ 15 ವರ್ಷಗಳಿಂದ ಡಾ. ಅರವಿಂದ ಕಿಣಿ ಹಾಗೂ ಡಾ. ನಿವೇದಿತಾ ಕಿಣಿ ಯವರ ಅತ್ಯುತ್ತಮ ಚಿಕಿತ್ಸೆಯಿಂದ ಬಹಳಷ್ಟು ಖ್ಯಾತಿ ಹೊಂದಿದೆ ಶ್ರೀ ಶ್ರೀನಿವಾಸ ನೇತ್ರಾಲಯ. ನೀರು ರಹಿತ ಕಣ್ಣಿನ ಚಿಕಿತ್ಸೆಯನ್ನು ಪ್ರಪ್ರಥಮ ಬಾರಿಗೆ ಮೂಡುಬಿದಿರೆಯಲ್ಲಿ ನೀಡುತ್ತಿರುವುದು ಶ್ರೀನಿವಾಸ ನೇತ್ರಾಲಯದ ವಿಶೇಷತೆಯಾಗಿದೆ. ಕಣ್ಣಿನ ಅತ್ಯುತ್ತಮ ಚಿಕಿತ್ಸೆಯೊಂದಿಗೆ, ವಿಶೇಷ ತಜ್ಞ ವೈದ್ಯರುಗಳಿಂದ ಚಿಕಿತ್ಸೆ, ಜೀವ ವಿಮಾ ಸೌಲಭ್ಯ ಇತ್ಯಾದಿ ಹಲವಾರು ಸೌಲಭ್ಯಗಳನ್ನು ಒಂದೇ ಸೂರಿ ನಡಿ ಒದಗಿಸುವಲ್ಲಿ ಶ್ರೀನಿವಾಸ ನೇತ್ರಾಲಯ ಖ್ಯಾತವಾಗಿದೆ.
ತನ್ನ ಸ್ವಂತ ಸುಸಜ್ಜಿತ ವಿಶಾಲ ಕಟ್ಟಡಕ್ಕೆ ಮೇ 29ರಂದು ವರ್ಗಾವಣೆ ಗೊಳ್ಳುತ್ತಿರುವ ಶ್ರೀನಿವಾಸನ್ ನೇತ್ರಾಲಯದ ಉದ್ಘಾಟನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಮೂಡುಬಿದಿರೆ ಜೈನ ಮಠಾಧೀಶ ಚಾರುಕೀರ್ತಿ ಭಟ್ಟಾರಕರು ಆಶೀರ್ವಚನ ಗೈಯಲಿದ್ದಾರೆ. ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಚಿಕಿತ್ಸಾ ಕೋಣೆಯನ್ನು, ಮಾಜಿ ಸಚಿವ ಅಭಯ ಚಂದ್ರ ಜೈನ್ ಕನ್ನಡಕದ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.