ಬಂಟ್ವಾಳದ ಕುರಿಯಾಳದ ಕಾಂಬೋಡಿಯ ಇರಕೋಡಿಯ ಕೊಲ್ತಾಮಜಲು ನಿವಾಸಿ ರಹೀಮ್ ಎಂಬಾತನ ಹತ್ಯೆ ಯಾದ ಘಟನೆ ನಡೆದಿದೆ. ಮರಳು ಆನ್ ಲೋಡ್ ಮಾಡುತಿದ್ದಾಗ, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದಾರೆ.
ರಹೀಮ್ ಜೊತೆಗಿದ್ದ ಯುವಕನಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ರಹೀಮ್ ಪಿಕ್ ಅಪ್ ಡ್ರೈವರ್ ಆಗಿ ಕೆಲಸ ಮಾಡುತಿದ್ದ ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.