ಕಿನ್ನಿಗೋಳಿ: ಯುವಕರೇ ಸಮಾಜದ ಕಣ್ಣು ಇದ್ದಾಗೆ ಒಳ್ಳೆಯ ಕೆಲಸ ಮಾಡಿ ಇನ್ನೊಬ್ಬರ ಸಹಾಯಕ್ಕೆ ಸ್ಪಂದಿಸಬೇಕು ಎಂದು ರೆಮೆದಿ ಅಮ್ಮನವರ ಇಗರ್ಜಿ ದಾಮಸ್ ಕಟ್ಟೆ ಇದರ ವಂದನೇ ಧರ್ಮ ಗುರುಗಳಾದ ಫಾ. ಆಸ್ವಲ್ಡ್ ಮೊಂತೇರೊ  ಹೇಳಿದರು.

ಅವರು ಆದಿತ್ಯವಾರದಂದು ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ರೆಮೆಡಿ ಅಮ್ಮನವರ ಸಭಾಭವನದಲ್ಲಿ  ಭಾರತೀಯ ಕಥೋಲಿಕ್ ಯುವ ಸಂಚಾಲನ ಸಂತ ಜೂದ ಮಂಗಳೂರು ಉತ್ತರ ವಲಯ ಇದರ ಆಶ್ರಯದಲ್ಲಿ ನಡೆದಯುವ ಸಮಾವೇಶ ಸಿನರ್ಜಿ 2023 (synergy 2023) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಫಾ. ಪ್ರವೀಣ್ ಎಸ್ ವಿ ಡಿ,  ಫಾ. ಸುನಿಲ್ ಡಿಸೋಜ ನಿರ್ದೇಶಕರು ಭಾರತೀಯ ಕಥೋಲಿಕ್ ಯುವ ಸಂಚಾಲನ ಸಂತ ಜೂದ ಮಂಗಳೂರು ಉತ್ತರ ವಲಯ, ಮಿತೆಷ್ ಡಿಸೋಜ  ಅಧ್ಯಕ್ಷರು ಐ ಸಿ ವೈ ಎಂ ಕೇಂದ್ರೀಯ ಸಮಿತಿ ಮಂಗಳೂರು ಧರ್ಮ ಪ್ರಾಂತ್ಯ, ಲವಿಟ, ಅನಿಷ, ರೋಹನ್ ಐ ಸಿ ವೈ ಎಂ ಕೇಂದ್ರೀಯ ಸಮಿತಿ ಮಂಗಳೂರು ಧರ್ಮ ಪ್ರಾಂತ್ಯ, ಲೆಸ್ಟರ್ ಲಸ್ರಾದು, ಅಧ್ಯಕ್ಷರು  ಐ ಸಿ ವೈ ಎಂ ಸಂತ ಜೂದ ಮಂಗಳೂರು ಉತ್ತರ ವಲಯ, ಲಾಯ್ಡ್ ಡಿಸೋಜಾ ಕಾರ್ಯದರ್ಶಿ ಐ ಸಿ ವೈ ಎಂ ಸಂತ ಜೂದ ಮಂಗಳೂರು ಉತ್ತರ ವಲಯ, ರೋಹನ್ ಡಿಕೋಸ್ಟಾ ಉಪಾಧ್ಯಕ್ಷರು ಪಾಲನ ಮಂಡಳಿ ರೆಮೆದಿ ಅಮ್ಮನವರ  ಇಗರ್ಜಿ,  ಜೇಮ್ಸ್ ಲೋಬೋ ಕಾರ್ಯದರ್ಶಿ ಪಾಲನ ಮಂಡಳಿ ರೆಮೆದಿ ಅಮ್ಮನವರ  ಇಗರ್ಜಿ, ವಲಯದ ಎಲ್ಲ ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತಿತರರು ಉಪಸ್ಥಿತರಿದ್ದರು.