ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫಘಾನಿಸ್ತಾನ ಲೆಟರ್ ಹೆಡ್‌ನಲ್ಲಿ ಅಫಘಾನಿಸ್ತಾನದ ತಾತ್ಕಾಲಿಕ ಸರಕಾರದ ವಾಯುಯಾನ ಸಚಿವಾಲಯವು ಡಿಜಿಸಿಎ- ಭಾರತೀಯ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ ವಾಣಿಜ್ಯ ವಿಮಾನ ಯಾನಗಳನ್ನು ಆರಂಭಿಸುವಂತೆ ಪತ್ರ ಬರೆದಿದೆ.
ಆಗಸ್ಟ್ 15ರಂದು ತಾಲಿಬಾನಿಗರು ಕಾಬೂಲ್ ಗೆದ್ದಾಗ ಭಾರತದಿಂದ ವಿಮಾನ ಸಂಚಾರ ನಿಂತಿದೆ. ಆಗಸ್ಟ್ 31ರ ದಿನ ಅಮೆರಿಕವು ಕಾಬೂಲ್ ಬಿಡುವವರೆಗೆ ತೆರವು ಕಾರ್ಯಾಚರಣೆ ವಿಮಾನಗಳು ಹಾರಾಡಿದವು.
ಸದ್ಯ ಇರಾನ್ ಮತ್ತು ಪಾಕಿಸ್ತಾನದಿಂದ ಮಾತ್ರ ಮಾಮೂಲು ವಿಮಾನ ಸಂಚಾರ ಕಾಬೂಲಿಗೆ ಇವೆ. ಟರ್ಕಿ, ಕತಾರ್‌ನಿಂದ ವಿಶೇಷ ವಿಮಾನಗಳು ಮಾತ್ರ ಬರುತ್ತಿವೆ.
ಭಾರತದಿಂದ ಅಫಘಾನಿಸ್ತಾನಕ್ಕೆ ಹೋಗಲು ತುಂಬಾ ಜನ ಕಾದಿದ್ದಾರೆ. ಈಗ ಎಲ್ಲೋ ಕೆಲವರು ಶಾರ್ಜಾ ಹೋಗಿ, ಇಸ್ಲಾಮಾಬಾದ್ ಹೋಗಿ ಕಾಬೂಲಿಗೆ ಹೋಗುತ್ತಾರೆ. ಇದು ಜನಸಾಮಾನ್ಯರಿಗೆಲ್ಲ ಸಾಧ್ಯವಾಗುವ ಸಂಗತಿಯಲ್ಲ.