ಮಂಗಳೂರು: 'ತಾರನಾಥ್ ಬೋಳಾರ್ ಅವರದ್ದು ಸೃಜನಶೀಲ ಮನಸ್ಸಾಗಿತ್ತು..ಅವರದ್ದು ಬಹುಮುಖ ಸಾಧನೆಯ ವ್ಯಕ್ತಿತ್ವವಾಗಿತ್ತು. ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿದ್ದ ಅವರು ಸಮಾಜಕ್ಕೆ ಮತ್ತು ಸಾಹಿತ್ಯ ಲೋಕಕ್ಕೆ ಇನ್ನಷ್ಟು ಸೇವೆ ನೀಡಬೇಕು ಎಂಬ ತುಡಿತ ಹೊಂದಿದ್ದರು' ಎಂದು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಅಭಿಪ್ರಾಯ ಪಟ್ಟರು..

ಅವರು ಮಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ನಡೆದ ಮಾಜಿ ಯೋಧ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದಿವಂಗತ ತಾರನಾಥ ಬೋಳಾರ್ ಅವರ ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿ ನುಡಿನಮನ ಸಲ್ಲಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹರೀಶ್ ಸುಲಾಯ ಒಡ್ಡಂಬೆಟ್ಟು, ಜಿಲ್ಲಾ ಚುಸಾಪದ ಮಾಜಿ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಮಂಗಳೂರು ತಾಲೂಕು ಚುಸಾಪದ ಅಧ್ಯಕ್ಷ ಕಾ.ವೀ.ಕೃಷ್ಣದಾಸ್,ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ,

ತಾಲೂಕು ಚುಸಾಪದ ನಿಕಟಪೂರ್ವ ಅಧ್ಯಕ್ಷ ರೇಮಂಡ್ ಡಿಕುನಾ, ತಾಲೂಕು ಚುಸಾಪದ ಮಾಜಿ ಅಧ್ಯಕ್ಷರಾದ ರಘು ಇಡ್ಕಿದು, ಸುಬ್ರಾಯ ಭಟ್,ಡಾ.ಸುರೇಶ್ ನೆಗಳಗುಳಿ,ಹೆಸರಾಂತ ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್, ತಾಲೂಕು ಸಮಿತಿಯ ಜತೆ ಕಾರ್ಯದರ್ಶಿ ವೆಂಕಟೇಶ್ ಗಟ್ಟಿ, ವಿಘ್ನೇಶ್ ಭಿಡೆ, ಬೋಳಾರ್ ಅವರ ಸಹೋದ್ಯೋಗಿಯಾಗಿದ್ದ ಶ್ರೀನಿವಾಸ್ ಅವರು ನುಡಿನಮನ ಸಲ್ಲಿಸಿದರು. ಬೋಳಾರ್ ಅವರ ಬಾವ ರಘುಪತಿ, ಕವಿ ಗೋಪಾಲಕೃಷ್ಣ ಕಟ್ಟತ್ತಿಲ ಉಪಸ್ಥಿತರಿದ್ದರು..