ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಮುದಾಯದತ್ತ ಕಾರ್ಯಕ್ರಮ ಅಕ್ಟೋಬರ್ 30ರಂದು ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ ವಿವಿಧ ಕ್ರೀಡಾ ಸ್ಪರ್ಧಾಳುಗಳನ್ನು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉಮೇಶಗೌಡ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯರಾಮ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಾಲಾ ಭೋಜನಾಲಯ ಹಾಗೂ ರಂಗಮಂದಿರದ ನಿರ್ಮಾಣಕ್ಕೆ ನೀಡಲಾದ ಎರಡು ಲಕ್ಷದ ಸಹಾಯಧನದ ಚೆಕ್ಕನ್ನು ಶಾಲಾ ಉಪ ಪ್ರಾಚಾರ್ಯ ಲೋನಾ ಅವರಿಗೆ ಹಸ್ತಾಂತರಿಸಿದರು. 

ಹತ್ತನೇ ತರಗತಿಯ ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸುವ ಕ್ರಮಗಳ ತರಬೇತಿಯನ್ನು ಬೆಂಗಳೂರು ಸೂರ್ಯ ಫೌಂಡೇಶನ್ ನ ದ.ಕ. ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ, ರಾಯಿ ರಾಜಕುಮಾರ ಮೂಡುಬಿದಿರೆ ಯವರು ನಡೆಸಿಕೊಟ್ಟು ತರುವಾಯ ಹೆತ್ತವರು ಹಾಗೂ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಹೆತ್ತವರ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಹೆತ್ತವರು ತಮ್ಮ ಮಕ್ಕಳಿಗೆ ರೀತಿ, ನೀತಿ, ಕ್ರಮ, ನಿಯಮ, ನಡೆತೆಗಳನ್ನು ಕಲಿಸಿರಿ. ಶಿಕ್ಷಣ ಮುಗಿಯುವ ತನಕ ಮೊಬೈಲು, ಎರಡು ಚಕ್ರದ ವಾಹನಗಳನ್ನು ಕೊಡುವುದರ ಬಗ್ಗೆ ಸಾಕಷ್ಟು ಆಲೋಚಿಸಿಕೊಳ್ಳಿ ಎಂದು ತಿಳಿಹೇಳಿದರು

ಈ ಸಂದರ್ಭದಲ್ಲಿ ಸ್ವಸಹಾಯ ಒಕ್ಕೂಟದ ಅಧ್ಯಕ್ಷ ಸುರೇಶ್ ಪೂಜಾರಿ, ಸೇವಾ ಮೇಲ್ವಿಚಾರಕ ಬಾಬು ಕೆ, ಜನಜಾಗ್ರತಿ ವೇದಿಕೆಯ ಅರ್ಕ ಕೀರ್ತಿ ಜೈನ್, ಸ್ವಸಹಾಯ ಸಂಘದ ಅಧಿಕಾರಿಗಳು, ಶಾಲೆ ಹಳೇ ವಿದ್ಯಾರ್ಥಿ ಸಂಘದ ಪ್ರಭಾಕರ ಪ್ರಭು, ಎಲ್ಲಾ ಶಿಕ್ಷಕರು ವೇದಿಕೆಯಲ್ಲಿ ಹಾಜರಿದ್ದರು. ಅಧ್ಯಾಪಕ ಮಹೇಶ್ ಕುಮಾರ್, ಸ್ವಾಗತಿಸಿ ವಂದಿಸಿದರು.