ತೇರ್ ಪೂ, ರಥ ಹೂವು ಎನ್ನುವುದು ಹೂವಿನ ಗೊಂಚಲು ತೇರಿನಂತೆ ನಿಂತಿರುವ ಒಂದು ಕಳೆ ಗಿಡದ ಹೂವಿನ ಬಗೆಯಾಗಿದೆ. ಇದು ಬೌದ್ಧರ ಪಗೋಡದಂತೆ ಇರುವುದರಿಂದ ಕಾಣುವುದರಿಂದ ಇಂಗ್ಲಿಷಿನಲ್ಲಿ ಇದನ್ನು ಪಗೋಡ ಫ್ಲವರ್ ಎನ್ನುವರು.

ಇದು ಮಳೆಗಾಲದಲ್ಲಿ ತಾನಾಗಿಯೇ ಬೆಳೆಯುತ್ತದೆ. ಇದನ್ನು ಇಲ್ಲಿ ಯಾರೂ ಬೆಳೆಸುವುದಿಲ್ಲ. ಅಲಂಕಾರಕ್ಕೆ ಈಗೀಗ ಬೇರೆ ದೇಶಗಳಲ್ಲಿ ಬೆಳೆಸುವವರು ಕೆಲವರು ಇದ್ದಾರೆ. ಕುಂಡದಲ್ಲಿ ಬೆಳೆಯುವ ಹೂವಾಗಿಯೂ ಇದು ಬೌದ್ಧ ಬಾಹುಳ್ಯದ ದೇಶಗಳಲ್ಲಿ ಬಡ್ತಿ ಪಡೆದಿದೆ.

ಭಾರತ ಮತ್ತು ಚೀನಾ ಸಹಿತ  ಕೊಂಗಣ ಏಶಿಯಾ ಇದರ ಮೂಲ ನೆಲೆ. 6 ಅಡಿ ಎತ್ತರ ಬೆಳೆಯುವ ಈ ಗಿಡದಲ್ಲಿ 1 ಅಡಿ ಎತ್ತರದವರೆಗೂ ಹೂಕೋಲು ಇರುತ್ತದೆ.

ಲೇಮಿಯೇಸೀ ಕುಟುಂಬದಲ್ಲಿ ಕ್ಲೆರೊಡಂಡ್ರಮ್ ಜಾತಿಗೆ ಇದು  ಸೇರಿದೆ.