Speciel Story by - Sudeep Dsouza, Kinnigoli

ಕಿನ್ನಿಗೋಳಿ:  ಕಿನ್ನಿಗೋಳಿಂದ ಬೆಳ್ಮಣ್ ಸಂಚರಿಸುವ ರಸ್ತೆ ಏಳಿಂಜೆ ಶ್ರೀ ಲಕ್ಷ್ಮಿ ಜನಾರ್ದನ ಮಹಾ ಗಣಪತಿ ದೇವಸ್ಥಾನದ ಬಳಿ ಒಂದು ಸುಂದರವಾದ ಬಾವಲಿಧಾಮ ಇದ್ದು ಸರಿಸುಮಾರು ನಾಲ್ಕರಿಂದ ಆರು ಬೃಹತ್ ಗಾತ್ರ ಮರಗಳಲ್ಲಿ ವಿಧ ವಿಧದ ಪಕ್ಷಿಗಳು ಮರದಲ್ಲಿ ಕೂತಿರುವ ದೃಶ್ಯ ಕಂಡು ಬರುತ್ತದೆ.

ಸರಿಸುಮಾರು 50 ರಿಂದ 70 ವರ್ಷದ ಇತಿಹಾಸವುಳ್ಳ ಈ ಬಾವಲಿಧಾಮ ಕಳೆದ ಹಲವಾರು ವರ್ಷಗಳಿಂದ ಇದನ್ನು ಸಂರಕ್ಷಿಸಿ ಬರುತ್ತಿದ್ದು, ಪ್ರಸ್ತುತ ಇಲ್ಲಿ ಬಾವಲಿಯೊಂದಿಗೆ ಪಾರಿವಾಳ ಗುಬ್ಬಚ್ಚಿ ಕಾಗೆ ಮತ್ತಿತರ ಪಕ್ಷಿಗಳು ಈ ಸ್ಥಳದಲ್ಲಿ ಕಂಡುಬರುತ್ತದೆ. ಇಲ್ಲಿ ಸರಿಸುಮಾರು 1500 ದಿಂದ 3500 ತನಕ ಬಾವಲಿಗಳು ಇದ್ದು ಈ ಜಾಗಕ್ಕೆ ಭಾವಲಿ ಧಾಮ ಎಂದು ಪ್ರಸಿದ್ಧಿ ಪಡೆದಿದೆ.

ಈ ಸ್ಥಳವು ಸುತ್ತಲೂ ಸಣ್ಣ ಪುಟ್ಟ ಅರಣ್ಯ ಹೊಂದಿದ್ದು ಆಲದ ಮರ, ಹುಣಸೆ ಮರ, ಹಲಸಿನ ಮರ ಸಾಗುಣಿ ಅಕೇಶಿ ಮತ್ತು ಹಲವು ಮರಗಳು ಇದ್ದು ಈ ಮರಗಳಲ್ಲಿ ಬಾವಳಿಗಳು ವಾಸವಾಗುತ್ತಿದೆ. ಈ ಸ್ಥಳದಲ್ಲಿದ್ದ ಯಾವುದೇ ಮರವು ಇಷ್ಟರವರೆಗೆ ಕಡಿತದ್ದಿಲ್ಲ. ಹಗ್ಗಲಿನ ಹೊತ್ತಿನಲ್ಲಿ ಬಾವಲಿಗಳು ಮಲಗಿರುತ್ತದೆ ಹಾಗೂ ರಾತ್ರಿ ಹೊತ್ತಲ್ಲಿ ತಮ್ಮ ಪ್ರವಾಸಕ್ಕೆ ಹೋಗುತ್ತವೆ.

ಈ ಭಾವಲಿ ಧಾಮದಲ್ಲಿ ಹಲವು ವಿಧದ ಸಣ್ಣ ಗಾತ್ರದ ದೊಡ್ಡ ಗಾತ್ರದ ಹಾಗೂ ಮರಿಗಳು ಮತ್ತಿತರ ಗಾತ್ರದ ಬಾವಲಿಯು ಇಲ್ಲಿ ಕಾಣಲು ಸಿಗುತ್ತದೆ. ಅಷ್ಟೇ ಅಲ್ಲದೆ ಈ ಬಾವಲಿ ಧಾಮದಲ್ಲಿ ಬಹು ಅಪ್ರೂಪ  ಬಗೆಯ ಬಾವಲಿಯು ಇಲ್ಲಿ ವಲಸೆ ಬರುತ್ತವೆ. ಅವುಗಳ ಸಂತಾನವು ಈ ಭಾವಲಿ ಧಾಮದಲ್ಲಿ ಅಭಿವೃದ್ಧಿ ವಾಗುತ್ತದೆ ಹಾಗೂ ಮರಿಗಳು ಇಲ್ಲೇ ಇಡುತ್ತದೆ.

ವಿಶೇಷ ಏನೆಂದರೆ ಹಣ್ಣು ಹಂಪಲು ಆಗುವ ಸಮಯದಲ್ಲಿ ಬಾವಲಿಯೂ ಎಲ್ಲಾ ಕಡೆ ಸುತ್ತಿ ಬೀಜ ಮಾವು ಅಡಿಕೆ ಮತ್ತಿತರ ಹಣ್ಣುಗಳು  ಈ ಬಾವಲಿ ದಾಮದ ಬಳಿ ತಂದು ಹಾಕುತ್ತವೆ ಇದರಿಂದ ಸ್ಥಳೀಯ ಮನೆಗಳಿಗೆ ಬೀಜ ಹಾಗೂ ಅಡಿಕೆ ಇಲ್ಲ ಸಿಗುತ್ತದೆ. 

ಶ್ರೀ ಕ್ಷೇತ್ರ ಏಳಿಂಜ ಲಕ್ಷ್ಮಿ ಜನಾರ್ದನ ಮಹಾಗಣಪತಿ ದೇವಸ್ಥಾನ ಅರ್ಚಕರ ಮನೆತನಕ್ಕೆ ಸೇರಿದ ಜಾಗದಲ್ಲಿ ಈ ಬಾವಲಧಾಮವು ಇದ್ದು ಈ ಜಾಗದಲ್ಲಿ ನಾಗಬನ ಇದೆ ಹಾಗೂ ಬಾವಲಿ ಧಾಮದ ಬಳಿ ಹಲವು ಮನೆಗಳಿದ್ದು ಬಾವಲಿಯು ಯಾರಿಗೂ ಯಾವುದೇ ತರದ ತೊಂದರೆ ಉಂಟು ಮಾಡಿದ್ದಿಲ್ಲ.

ಇಲ್ಲಿಯ ಬಾವಲಿ ಧಾಮದ ಸಂರಕ್ಷಣೆ!

ಅರಣ್ಯ ಇಲಾಖೆ, ಸ್ಥಳೀಯವಾದ ಐಕ್ಕಳ ಗ್ರಾಮ ಪಂಚಾಯತ್, ಶ್ರೀ ಲಕ್ಷ್ಮಿ ಜನಾರ್ಧನ ಮಹಾಗಣಪತಿ ದೇವಸ್ಥಾನ ಮತ್ತು ಸ್ಥಳೀಯ ಮನೆಯವರ ಸಹಕಾರದಿಂದ ಈ ಭಾವನೆಗಳು ಸಂರಕ್ಷಿಸುತ್ತ ಬಂದಿದ್ದಾರೆ.

ಹಲವಾರು ವರ್ಷಗಳಿಂದ ಈ ಬಾವಲಿಗಳು ಇದೆ, ಶ್ರೀ ಲಕ್ಷೀ ಜನಾರ್ದನ ಮಹಾಗಣಪತಿ ದೇವಸ್ಥಾನದ  ಅಷ್ಡಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಶ್ರೀ ಕ್ಷೇತ್ರದ ವಿಷ್ಣು ಸಹಸ್ರನಾಮಾವಳಿಯನ್ನು ನಿತ್ಯವೂ ಬಾವಲಿಗಳು ಜಪ ಮಾಡುತ್ತದೆ, ಇಲ್ಲಿ ಯಾವುದೇ ಲೋಪ ದೋಷ ಇಷ್ಟರವರೆಗೆ ನಡೆದಿಲ್ಲ ಇದು ಕ್ಷೇತ್ರಕ್ಕೆ ಸಂಬಂಧಪಟ್ಟ ಅರ್ಚಕರ ನಾಗಬನದ ಜಾಗದಲ್ಲಿ ವಾಸಿಸುತ್ತಿದ  ಎಂದು ಸ್ಥಳೀಯರಾದ ವರುಣ್ ಭಟ್ ಏಳಿಂಜೆ  ಅವರು ತಿಳಿಸಿದರು.

Story By

Sudeep Dsouza Kinnigoli