ಮುಂಬಯಿ: ಖ್ಯಾತ ಪತ್ರಕರ್ತೆ, ಅಂಕಣಕಾರ್ತಿ ಕವಿತಾ ಅಡೂರ್ ಅವರ ಸಾಹಿತ್ಯದ ಉತ್ಕಟ  ಪ್ರೀತಿ ಅಭಿವ್ಯಕ್ತದ  ಗೀತೆಯನ್ನು ವಿ ಮನೋಹರ್ ಸಂಗೀತ ಸಂಯೋಜನೆಯಲ್ಲಿ ಐಲೇಸಾದ ಯುವ ಗಾಯಕಿ ಸುಮಾ ಕೋಟೆ ಭಾವಪೂರ್ಣವಾಗಿ ಹಾಡಿದ ಹೊಸ ಹಾಡು ''ಒಸರ್'' ತುಳುವೆರ್ ಸಿಂಗಾಪುರ ಪ್ರಾಯೋಜಕತ್ವದಲ್ಲಿ ಐಲೇಸಾ ಮುಂದಾಳುತ್ವದಲ್ಲಿ ಇದೇ ಆ. 31ರ ಭಾನುವಾರ ಬಿಡುಗಡೆ ಆಗಲಿದೆ. 

ಐಲೇಸಾ ಈ ಹಿಂದೆ  ತುಳುವೆರ್  ಸಿಂಗಾಪುರ ಕೂಟದ ಸ್ಥಾಪಕ ಅಧ್ಯಕ್ಷ ರಾಜೇಶ್ ಆಚಾರ್ಯ ಅವರು ಕೃತಕ ಬುದ್ಧಿಮತ್ತೆಯ  ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಮೊದಲ ಬಾರಿಗೆ ಎಐ ತಂತ್ರಜ್ಞಾನ ಬಳಸಿ ಐಲೇಸಾ  ಮ್ಯೂಸಿಕ್ ಚಾನೆಲ್  ಈ  ಹಾಡಿನ ವಿಡಿಯೋವನ್ನು ತಯಾರಿಸಿದ್ದು  ತುಳುವೆರ್ ಸಿಂಗಾಪುರದ  ಸಹಕಾರದಲ್ಲಿಯೇ ಈ ಹಾಡನ್ನು ಬಿಡುಗಡೆಗೊಳಿಸಲು  ಬಯಸಿತ್ತು.  

ರಾಜೇಶ್ ಆಚಾರ್ಯ  ತಮ್ಮ  ಸಂಸ್ಥೆಯ  ಸದಸ್ಯರ  ಜೊತೆ ಸೇರಿಕೊಂಡು  ಬ್ರಹ್ಮಾವರ್ ರಾಕೇಶ್ ಶೆಟ್ಟಿ ,ಪ್ರಶಾಂತ್ ರಾವ್ ಪೇಜಾವರ, ನಲ್ಲೂರು ಆನಂದ ಶೆಟ್ಟಿ, ಭರಣಗೆರೆ ನಿತ್ಯಾನಂದ ಹೆಗ್ಡೆ, ರಾಜೇಶ್ ಹಯವದನ ಆಚಾರ್ಯ ಇವರ ಮುತುವರ್ಜಿಯಿಂದ ಈ ಹಾಡಿನ ನ ಲೋಕಾರ್ಪಣೆಗೆ  ಸಹಕಾರವಿತ್ತಿದ್ದಾರೆ.    

ಗುಜರಾತ್ ನ ರಾಮ್ ಪಟೇಲ್ ವೀಡಿಯೊ ತಯಾರಿಸಿದರೆ ಸುಮಾ ಕೋಟೆ ಸಹಕರಿಸಿದ್ದಾರೆ. 

ಹಾಡನ್ನು ಇದೇ ಆ. 31ರ ಸಂಜೆ 6:00 ಗಂಟೆಗೆ  ಐಲೇಸಾದ ಪ್ರೋತ್ಸಾಹಕರೂ, ತುಳು ಭಾಷಾ ಲಿಪಿ ಪ್ರವೀಣರೂ ಆದಂತಹ ಆಸ್ಟ್ರೇಲಿಯ ಸಿಡ್ನಿ ತುಳುಕೂಟದ ಸ್ಥಾಪಕ ಸುರೇಶ ಪೂಂಜಾ  ಬಿಡುಗಡೆಗೊಳಿಸಲಿದ್ದಾರೆ. ಅನಂತ್ ರಾವ್  ನಿರ್ವಹಿಸುವ  ಈ  ಕಾರ್ಯಕ್ರಮ ಜೂಮ್ ವೇದಿಕೆಯಲ್ಲಿ ನಡೆಯಲಿದ್ದು  ತಾಂತ್ರಿಕವಾಗಿ  ಗೋಪಾಲ್ ಪಟ್ಟೆ , ಸುವಿಧ್ ಮಾರ್ನಾಡ್  ಸಹಕರಿಸಲಿದ್ದಾರೆ.  ಸಂಗೀತ ಪ್ರಿಯರು ಝೂಮ್  ಸಂಖ್ಯಾ ಗುರುತು : 5340283988 ಪಾಸ್ ಕೋಡ್: 0324  ಬಳಸಿ  ಈ ಹಾಡಿನ ಬಿಡುಗಡೆಯಲ್ಲಿ  ಪಾಲ್ಗೊಳ್ಳಲು ಮುಂಬೈ ಸಂಚಾಲಕರಾದ ಸುರೇಂದ್ರ ಮಾರ್ನಾಡು  ವಿನಂತಿಸಿದ್ದಾರೆ