ರಾಜಸ್ತಾನದ ಬಾರ್ಮೇರ್ ಜಿಲ್ಲೆಯ ಪೋಶಾಲಾ ಗ್ರಾಮದಲ್ಲಿ 30ರ ಪುರ್ಕಾರಾಮ್ ಎಂಬ ಒತ್ತಡಕ್ಕೆ ಒಳಗಾದ ವ್ಯಕ್ತಿಯು ತನ್ನ ನಾಲ್ಕು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ನೀರಿನ ತೊಟ್ಟಿಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪುರ್ಕಾರಾಮ್ನ ಹೆಂಡತಿ ಐದು ತಿಂಗಳ ಹಿಂದೆ ಕೊರೋನಾ ಮರಣ ಕಂಡಿದ್ದು, ಅಂದಿನಿಂದ ಈತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
13 ಅಡಿ ನೀರು ತುಂಬಿದ್ದ ತೊಟ್ಟಿಯಲ್ಲಿ ಮುಳುಗಿ 9ರ ಜಿಯೋ, 7ರ ನೂಜಿ, 3ರ ಲಾಸಿ ಮತ್ತು ಒಂದೂವರೆ ವರುಷದ ಮಗು ಸಾವಿಗೀಡಾಗಿದ್ದಾರೆ. ಅಷ್ಟರಲ್ಲಿ ಪೋಲೀಸರಿಗೆ ಸುದ್ದಿ ಮುಟ್ಟಿದೆ. ಅವರು ಬಂದು ಪ್ರಜ್ಞೆ ತಪ್ಪಿದ್ದ ಪುರ್ಕಾರಾಮನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಾಲ್ಕು ಮಕ್ಕಳು ಶವಪರೀಕ್ಷೆ ನಡೆದಿದ್ದು, ತಂದೆಯ ವಿರುದ್ಧ ಕೊಲೆ ಕೇಸು ದಾಖಲಾಗಿದೆ.