ಮೋದಿ ಸರಕಾರದಲ್ಲಿ 2014ರಿಂದಲೂ ಸಚಿವರಾಗಿದ್ದು, ಇದೇ ಜುಲಾಯಿಯಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ಶನಿವಾರ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದರು.

ಇತ್ತೀಚೆಗೆ ಸಚಿವ ಸಂಪುಟ ಪುನರ್ರಚನೆಯಲ್ಲಿ ಅವರನ್ನು ಕೈಬಿಡಲಾಗಿತ್ತು. ಮಮತಾ ಬ್ಯಾನರ್ಜಿಯವರ ಟೀಕಾಕಾರರಾದ ಅವರು‌ ಆಗ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. ಇಂದು ಅಚ್ಚರಿ ಎನ್ನುವಂತೆ ಟಿಎಂಸಿ ಸೇರಿದ್ದಾರೆ.