ಮುಂಬಯಿ (ಆರ್‍ಬಿಐ): ಡಾ| ಶಿವರಾಮ ಕಾರಂತ ವೇದಿಕೆ ಮತ್ತು ಹೃದಯವಾಹಿನಿ ಕರ್ನಾಟಕ ಮಂಗಳೂರು ಹಾಗೂ ದೆಹಲಿ ಕನ್ನಡಿಗರು ನವ ದೆಹಲಿ ಸಂಯುಕ್ತವಾಗಿ ಕಳೆದ ಭಾನುವಾರ ಚಾಣಕ್ಯಪುರಿ ಇಲ್ಲಿನ ವಿಶ್ವ ಯುವಕ ಕೇಂದ್ರದ ಸಭಾಂಗಣದಲ್ಲಿ 17ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದವು.

ನವ ದೆಹಲಿಯ ವರಿಷ್ಠ ಪೊಲೀಸ್ ಅಧಿಕಾರಿ (ಐಜಿಪಿ) ಸೋಮಶೇಖರ್ ನಿರಂಜನ್ ಜ್ಯೋತಿ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಹೊರನಾಡ ಕನ್ನಡಿಗರು ಸಂಘಟನೆ ವಿಷಯದಲ್ಲಿ ನಿರಾಸಕ್ತಿ ತೋರಿಸುತ್ತಿರು ವುದು ಅತ್ಯಂತ ವಿಷಾದನೀಯ ಸಂಘಟನೆಗಳ ಕಾರ್ಯಕ್ರಮಗಳು ಬರಿ ಭಾಷಣಗಳಿಗೆ ಸೀಮಿತವಾಗಬಾರದು. ಕಲೆ ಮತ್ತು ಸಂಸ್ಕೃತಿಗಳನ್ನು ನವಿರಾಗಿಸುವ ಕೆಲಸ ನಿರಂತರವಾಗಿ ಮಾಡಬೇಕು ಎಂದರು.

ಸಮ್ಮೇಳನಾಧ್ಯಕ್ಷ ಡಿ.ಎಸ್ ವೀರಯ್ಯ ಅಧ್ಯಕ್ಷೀಯ ಭಾಷಣಗೈದು ಹೊರನಾಡ ಕನ್ನಡಿಗರಿಗೆ ತಾಯ್ನಾಡಿನ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಅಭಿಮಾನ ಮತ್ತು ಅಪ್ಯಾಯಮಾನ ಅನನ್ಯವಾಗಿರುತ್ತದೆ, ಅದಕ್ಕೆ. ಒತ್ತಾಸೆ ನೀಡುವ ಸಾಂಸ್ಕೃತಿಕ ಸಮ್ಮೇಳನಗಳು ಆಗಿಂದಾಗ ಜರುಗುತ್ತಿರಬೇಕು. ಇಂತಹ ಸಮಾರಂಭಗಳನ್ನು ಪ್ರೋತ್ಸಾಹಿಸುವ ಸದಾಶಯವನ್ನು ಎಲ್ಲರೂ ಬೆಳೆಸಿಕೊಳ್ಳೋಣ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ| ಸತೀಶ್ ಕುಮಾರ್ ಹೊಸಮನಿ, ಬೆಂಗಳೂರುನ ಅಬಕಾರಿ ಉಪ ಆಯುಕ್ತ ಡಿಸಿ ಬಸಲಿಂಗಯ್ಯ ರುದ್ರಯ್ಯ ಹಿರೇಮಠ್, ಸುಪ್ರೀಂ ಕೋರ್ಟ್ ನ್ಯಾಯವಾದಿ ಶೇಖರ್ ಜಿ.ದೇವಸ, ರಕ್ಷಣಾ ಇಲಾಖೆಯ ಕಂಪ್ಯೂಟರ್ ವಿಭಾಗದ ಜಂಟಿ ನಿರ್ದೇಶಕ ಹರಿಪ್ರಿಯ ಮತ್ತು ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ| ವಿಶ್ವನಾಥ್ ಅತಿಥಿಗಳಾಗಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಾದ ಜಿ.ನಾಗರಾಜ್ ಬೆಂಗಳೂರು, ಡಾ| ಜೆ.ಆರ್ ಮನೋಜ್ ಶರ್ಮ, ಡಾ| ಪಿ.ಎ ಪತ್ತಾರ್, ಡಾ| ಅನಿಲ್ ಶ್ರೀನಿವಾಸ್, ಜಿ.ಕೆ ಶ್ರೀನಿವಾಸ್ ಸಾಲ್ಯಾನ್, ಬಿ.ಕೆ ನಾರಾಯಣ ಸ್ವಾಮಿ, ಡಾ| ಅರುಣ್ ಗುರೂಜಿ ಮತ್ತು ಡಾ| ಗಂಗರಾಜು ಗುರೂಜಿ ಇವರಿಗೆ ಹೃದಯವಂತರು ಪ್ರಶಸ್ತಿ -2023 ಪುರಸ್ಕಾರವನ್ನು ಗಣ್ಯರು ಪ್ರದಾನಿಸಿ ಅಭಿನಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿಎಸ್‍ಬಿ ಸಮಾಜ ನವದೆಹಲಿ ಇವರು ಸಮೂಹ ನೃತ್ಯ, ದೆಹಲಿ ಕನ್ನಡ ಹಿರಿಯ ಮಾಧ್ಯಮ ಶಾಲೆ ನವ ದೆಹಲಿ ಇವರು ಸಮೂಹ ಗಾನ, ಅರುಣೋದಯ ಕಲಾ ನಿಕೇತನ ಮುಂಬಯಿ ತಂಡವು ನೃತ್ಯ ರೂಪಕ, ನೃತ್ಯಾಭಿನಯ ಅಕಾಡೆಮಿ ಆಫ್ ಡಾನ್ಸ್ ಅಂಡ್ ಮ್ಯೂಸಿಕ್ ಡೆಲ್ಲಿ ಸಮೂಹವು ಓಡಿಸ್ಸಿ ನೃತ್ಯ, ಜನಕಪುರಿ ಕನ್ನಡ ಕೂಟ ಮತ್ತು ಜನಕಪುರಿ ಮಹಿಳಾ ಮಂಡಳಿ ಸಮೂಹ ಗಾಯನ, ಪುಷ್ಕರ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ ಟ್ರಸ್ಟ್ (ರಿ.) ಬೆಂಗಳೂರು, ಶ್ರೀ ರಾಜರಾಜೇಶ್ವರಿ ನೃತ್ಯಕಲಾ ಮಂದಿರ ಟ್ರಸ್ಟ್ ತುಮಕೂರು, ಜನಕಪುರಿ ಕನ್ನಡ ಕೂಟ (ರಿ.) ಮತ್ತು ಜನಕಪುರಿ ಮಹಿಳಾ ಮಂಡಳಿ ನೃತ್ಯರೂಪಕ, ಅವನಿ ಯೋಗ ನೃತ್ಯ, ಕಲಾವಿದರಾದ ಐಶಾನಿ ಆಚಾರ್ಯ, ಅಶ್ಮಿತ ಆಚಾರ್ಯ, ಸ್ನೇಹ ಆಚಾರ್ಯ ಮತ್ತು ಅದೋಕ್ಷಜ ವೆಂಕಟೇಶ್ ಮಕ್ಕಳ ಸಮೂಹ ನೃತ್ಯ, ಆರಾಧನ ಡಾನ್ಸ್ ಸ್ಕೂಲ್ ಬೆಂಗಳೂರು ನೃತ್ಯರೂಪಕ, ಕಲಾಜ್ಯೋತಿ ಕಲಾಕೇಂದ್ರ ಎಬಿಸಿಡಿ ನೃತ್ಯ ಶಾಲೆ ರಾಮನಗರ ಜಾನಪದ ನೃತ್ಯ, ರೆಶಿಕ ದೇವಸ ಇವರು ನಟೇಶ ಕೌತವಂ ಭರತನಾಟ್ಯ, ಕಲಾಶ್ರೀ ಜಾಹ್ನವಿ ರಾಜಾರಾಮನ್, ದೇವಿಕಾ ರಾಜಾರಾಮ್ ನೃತ್ಯರೂಪಕ, ಅಂತರಾಷ್ಟ್ರೀಯ ಜಾನಪದ ಗಾಯಕ ಗೋನಾಸ್ವಾಮಿ ಅವರು ಅಂತರಾಷ್ಟ್ರೀಯ ಸುಗಮ ಸಂಗೀತ, ಗಾಯಕ ವೆಂಕಟೇಶ್ ಮೂರ್ತಿ ಶಿರೂರ ಮತ್ತು ಪೂಜಾ ವಿಭೂತಿಮಠ ಇವರು ರಸಮಂಜರಿ ಸಾದರ ಪಡಿಸಿ ಪ್ರೇಕ್ಷಕರ ಮನಸೂರೆಗೊಳಿಸಿದರು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷ. ಇಂ| ಕೆ. ಪಿ ಮಂಜುನಾಥ್ ಸಾಗರ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ದೆಹಲಿ ಕನ್ನಡಿಗರು ಸಂಚಾಲಕ ಉಡುಪಿ ಹರಿ ಭಟ್ ಧನ್ಯವಾದವನ್ನಿತ್ತರು.