ಕಾನ್ಶಿರಾಂ ಅವರು ಕಟ್ಟಿದ ಬಿಎಸ್‌ಪಿ ಪಕ್ಷವನ್ನು ಮಾಯವತಿ ಅಪಹರಿಸಿ, ತನ್ನ ಜಹಗೀರು ಮಾಡಿಕೊಂಡಿದ್ದಾರೆ. ಅವರ ವಿರುದ್ಧ ನಿಲ್ಲುವ ಪಕ್ಷಗಳನ್ನು ಬೆಂಬಲಿಸುವುದಾಗಿ ಕಾನ್ಶಿರಾಂ ಅವರ ತಂಗಿ ಮತ್ತು ಸೋದರಳಿಯ ಹೇಳಿದ್ದಾರೆ.
ಪಂಜಾಬಿನಿಂದ ಅವರು ಲಕ್ನೋಗೆ ಮಾಜೀ ಶಾಸಕಿ ಸಾವಿತ್ರಿಭಾಯಿ ಫುಲೆ ಆಯೋಜಿಸಿದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಬಂದು ಪಾಲ್ಗೊಂಡರು.
ನಾವು ನೇರವಾಗಿ ಯಾವ ಪಕ್ಷದಲ್ಲೂ ಇಲ್ಲ ಎಂದು ಕಾನ್ಶಿರಾಂ ಫೌಂಡೇಶನ್ನಿನ ಅಧ್ಯಕ್ಷೆ ಸ್ವರ್ಣ ಕೌರ್ ಹೇಳಿದರು. ಕಾನ್ಶಿರಾಂ ಸ್ಮಾರಕದಲ್ಲಿ ಮಾಯಾವತಿ ಮೂರ್ತಿ ಏಕಿದೆ ಎಂದು ಸೋದರಳಿಯ ಲಕ್ಬೀರ್ ಸಿಂಗ್ ಪ್ರಶ್ನಿಸಿದರು.