ಸಿರಿಯಾ ರಾಜಧಾನಿ ದಮಾಸ್ಕಸ್‌ನ ಹಫೀಜ್ ಅಲ್ ಅಸಾದ್ ಸೇತುವೆಯ ಬಳಿ ಯೋಧರ ವಾಹನಕ್ಕೆ ಗುರಿಯಿಟ್ಟು ನಡೆದ ಎರಡು ಬಾಂಬ್ ಸ್ಫೋಟದಲ್ಲಿ 14 ಯೋಧರ ಸಾವಾಗಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವುದಾಗಿ ಅಲ್ಲಿನ ಟೀವಿಯ ರಾಷ್ಟ್ರೀಯ ವರದಿ ತಿಳಿಸಿದೆ.
ಇದರ ಬೆನ್ನಿಗೆ ದಂಗೆಕೋರರ ವಶದಲ್ಲಿರುವ ದಕ್ಷಿಣ ಇದ್ಲಿಕ್‌ನಲ್ಲಿ ನಡೆದ ಫಿರಂಗಿ ದಾಳಿಯಲ್ಲಿ ವಿದ್ಯಾರ್ಥಿಗಳ ಸಹಿತ 10 ಜನರು ಮರಣಿಸಿದರೆಂದು ಅಲ್ ಜಜೀರಾ ವರದಿ ಮಾಡಿದೆ.