ಪಾಲಕರೆ   ಆರಂಭ ಎಂಬುತಲಿ ಗುರುಗಳೆಲ 

ಶಾಲೆಯಲಿ ದಾಖಲಿಸಿ  ಸೇರಿಸಿರೆಲ 

ಸಾಲಿನಲಿ  ಬರುತಿರಲು ಸಂತಸದಿ ಪೋಷಕರೆ

ಸಾಲದದು ಆನಂದ ಲಕ್ಷ್ಮಿ ದೇವಿ.

ಈ ಮೇಲಿನ ಮುಕ್ತ ಕದಂತೆ  ಎಲ್ಲಡೆಯೂ ಶಾಲೆಗಳು ಪ್ರಾರಂಭವಾಗುತ್ತಿದೆ. ಪೋಷಕರೆಲ್ಲ ಶಾಲೆಗೆ ದಾಖಲಿಸಬೇಕಾಗಿ ಶಿಕ್ಷಕರು ಪ್ರಾರ್ಥಿಸುತ್ತಿದ್ದಾರೆ. ಸಾಲಿನಲ್ಲಿ ಬರುತಿರಲು ಸಂತಸದಿ ಪೋಷಕರೇ ಅಂದರೆ ತಮ್ಮ ಮಕ್ಕಳ ದಾಖಲಾತಿಯನ್ನು ಮಾಡುವುದಕ್ಕೆ ಸಾಲು ಸಾಲು ಬರುತ್ತಿದ್ದಾರೆ ಎಂದು. ನಿಮ್ಮ ಆನಂದ ಕಡಿಮೆ ಆಗದಿರಲೆಂದು ಮಕ್ಕಳನ್ನು ಓದಿಸುವಲ್ಲಿ ನಿಮ್ಮ  ಗಮನ ಹೆಚ್ಚಾಗಲಿ ಎಂದು ಹೇಳುತ್ತಾ  ದಯಮಾಡಿ ಮಕ್ಕಳನ್ನು ಬೇಗ ಬೇಗ ದಾಖಲಿಸಿ, ಶಾಲೆಗೆ ಕಳುಹಿಸಿಕೊಡಿ. ಎಂದು ಶಿಕ್ಷಕರು ಪೋಷಕರಿಗೆ ಪ್ರಾರ್ಥಿಸಿದ್ದಾರೆ. ಮಕ್ಕಳು ಬಾಲಕಾರ್ಮಿಕರಾಗದಂತೆ ಪ್ರತಿಯೊಂದು ಮಗುವು ವಿದ್ಯಾಭ್ಯಾಸವನ್ನು ಪಡೆಯಲೆಂದು ಸರ್ಕಾರ  ಹಲವಾರು ಯೋಜನೆಗಳನ್ನು  ಅಳವಡಿಸಿಕೊಂಡು. ಓದದಿರುವ ಮಕ್ಕಳನ್ನು ಹುಡುಕಿ ಶಾಲೆಗೆ ತರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಬಾಲಕಾರ್ಮಿಕರನ್ನು  ಗುರುತಿಸಿ ಅವರಿಗೆ ಬುದ್ಧಿಯನ್ನು ಹೇಳಿ.,ಶಾಲೆಗೆ ದಾಖಲಾಯಿಸುವ ಕಾರ್ಯಕ್ರಮವನ್ನು  ಹಲವರು ಹಮ್ಮಿಕೊಂಡಿದ್ದಾರೆ. ಹಲವಾರು ಸಮಾಜಿಕ ಕಾರ್ಯಕರ್ತರು, ಏನ್ ಜಿಯೋಗಳು, ಸಮಾಜ ಸುಧಾರಕರು.ಸಂಘ ಸಂಸ್ಥೆ ಅವರೆಲ್ಲ  ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ. ನಮ್ಮ ಭಾರತ ದೇಶದಲ್ಲಿ.  ಕರ್ನಾಟಕದಲ್ಲಿ ಬಾಲ ಕಾರ್ಮಿಕರು ಇರದಂತಾಗಬೇಕು. ಕನಿಷ್ಠ ವಿದ್ಯಾಭ್ಯಾಸವನ್ನು ಪ್ರತಿಯೊಬ್ಬರು ಹೊಂದಬೇಕೆಂಬುದೇ  ನಮ್ಮ ಸರ್ಕಾರ ಸಮಾಜದ ಗುರಿ.

 ಶಾಲೆ ಪ್ರಾರಂಭವಾಗುತ್ತಿದೆ ಎಂದರೆ ಮಕ್ಕಳಿಗೆ ಸ್ವಲ್ಪ ಇರಿಸು ಮುರುಸು ಸಹಜ. ಏಕೆಂದರೆ  ಮಕ್ಕಳು ನಲಿ ಕಲಿಯುತ್ತಾ ಆಟವಾಡುತ್ತಾ ಇದ್ದವರು. ಮತ್ತೆ ಶಾಲೆಗೆ ಮರಳಬೇಕೆಂದರೆ. ಅವರ ಸ್ವತಂತ್ರಕ್ಕೆ ಧಕ್ಕೆ ಬಂದ ಹಾಗೆ. ಹೇಳಬೇಕೆಂದರೆ ಮಕ್ಕಳಿಗೆ ಸ್ವಲ್ಪ ಆಸೆ ಆಮಿಷಗಳನ್ನು ಒಟ್ಟಿಗೆ ಪಾಲಿಸಬೇಕಾಗುತ್ತದೆ. ಅವರನ್ನು ಪ್ರೀತಿಯಲ್ಲಿ ಮಾತನಾಡಿಸುತ್ತಾ  ಶಾಲೆಗೆ ಬರುವ ಮೊದಲ ದಿನದಂದು  ವಿಶೇಷವಾದ ಗೌರವನ ವಿದ್ಯಾರ್ಥಿಗಳಿಗೆ ನೀಡುತ್ತಾ  . ಆಹ್ವಾನ ಮಾಡುವುದು ಸರ್ವೇಸಾಮಾನ್ಯವಾಗಿದೆ. ಈಗ ನಮ್ಮ ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ. ಏಕೆಂದರೆ  ಪ್ರತಿಯೊಂದು ಸರ್ಕಾರಿ ಶಾಲೆಗಳು  ಅಲ್ಲಿನ  ಶಿಕ್ಷಕರು ಬಹಳಷ್ಟು ಒಳ್ಳೆಯ ರೀತಿಯಲ್ಲಿ ಮಕ್ಕಳನ್ನು  ಪ್ರೀತಿ ವಿಶ್ವಾಸದಲ್ಲಿ ಮಾತನಾಡಿಸಿ ಅವರಿಗೆ ಪ್ರಾರಂಭದ ದಿನದಂದು ಉಡುಗೊರೆಗಳನ್ನು ನೀಡಿ ಆಹ್ವಾನಿಸುವುದು  ಸಹಜವಾಗಿದೆ. ಏಕೆಂದರೆ ನಮ್ಮ ಸರ್ಕಾರಿ ಸವಲತ್ತುಗಳು ಅಷ್ಟಿದೆ. ಈಗ ಸರ್ಕಾರದಿಂದಲೇ ಮೊದಲ ದಿನದಿಂದಲೆ ಮಕ್ಕಳಿಗೆ ಬಿಸಿ ಊಟ  ನೀಡಬೇಕೆಂದು ಸರ್ಕಾರ ಅನುಮತಿ ಮತ್ತು ಸಹಕಾರ ಸಲಹೆಗಳನ್ನು ನೀಡಲಾಗಿದೆ. ಸಮವಸ್ತ್ರ ಧರಿಸಿ ಬರುವಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಸೇರಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುತ್ತಾರೆ. ಶಾಲೆಗಳಲ್ಲಿ ಯಾವುದಾದರೂ  ಕಟ್ಟಡಗಳಲ್ಲಿ ಸಮಸ್ಯೆ ಇದ್ದರೆ ಅದನ್ನು ಶಾಲೆಯ ಪ್ರಾರಂಭದ ಮುಂಚಿತವಾಗಿ ಸರಿಪಡಿಸಿಕೊಂಡು ಶಾಲೆಯಲ್ಲಿ ಯಾವುದೇ ತೊಂದರೆ ಇರದಂತೆ  ಚಂದದ ಕಾರ್ಯಕ್ರಮವನ್ನು ಏರ್ಪಡಿಸಿ ಅಂದರೆ ಸಮವಸ್ತ್ರವನ್ನು  ಧರಿಸಿಕೊಂಡು ಶಾಲೆಗೆ ಬರುವ ಮಕ್ಕಳನ್ನು ಮಕ್ಕಳಿಗೆ ತಯಾರಿಸಿದಂತ ಹೂಗಳನ್ನು ಕೊಡುವುದು, ಪೆನ್ಸಿಲ್ ಪೆನ್ನುಗಳನ್ನು ಕೊಡುವುದು, ಹುಡುಗರುಗಳನ್ನು ನೀಡುತ್ತಾ, ಸಂತಸದಿಂದ ಶಾಲೆಗೆ ಬರಮಾಡಿಕೊಳ್ಳುತ್ತಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ  ಸ್ವಾಗತ ಕಾರ್ಯಕ್ರಮವೆಂದು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಾರೆ. ಒಟ್ಟಾರೆ ಮಕ್ಕಳನ್ನು ನಲಿ ಕಲಿ ಎಂಬಂತೆ ಸಂತಸದಿಂದ ಬರಮಾಡಿಕೊಳ್ಳುತ್ತಾರೆ. ಸರ್ಕಾರಿ ಶಾಲೆಗಳಾದರೆ  ಪಠ್ಯ ಪುಸ್ತಕ ರವಾನೆಗಳಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಶೂ ಸಾಕ್ಸ್ ವಿತರಣೆ ವಿಳಂಬವಾಗದಂತೆ ನೋಡಿಕೊಳ್ಳುತ್ತಾರೆ. ಸಮವಸ್ತ್ರಗಳನ್ನು ಸರಿಯಾಗಿ ನೀಡುತ್ತಾರೆ. ಅದಲ್ಲದೆ  ಸರ್ಕಾರಿ ಶಾಲೆಗಳಲ್ಲಿ ನೀಡುವಂತಹ ಬಿಸಿಯುಟದ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಮಾಡುವಂತೆ ಸರ್ಕಾರ ವ್ಯವಸ್ಥೆಯನ್ನು ಮಾಡುತ್ತದೆ. ಪ್ರೀತಿ ವಿಶ್ವಾಸ ಎಲ್ಲಿರುತ್ತದೆಯೋ ಅಲ್ಲಿ ಎಲ್ಲವೂ ಸರಿಯಾಗಿರುತ್ತದೆ ಎಂಬಂತೆ  ಗುರು ಶಿಷ್ಯರ ಸಂಬಂಧ ಹಾಗೆ ಇರಬೇಕು.  ಇಲ್ಲದಿದ್ದಲ್ಲಿ ಕಲಿಕೆಯಲ್ಲಿ ಬಹಳಷ್ಟು ತೊಂದರೆಗಳನ್ನು ನೋಡುತ್ತೇವೆ. ಬಹಳಷ್ಟು ಹೊರಟರಾದರು ಶಿಕ್ಷಕರು  ಮಕ್ಕಳು ಶಾಲೆಗೆ ಬರುವುದಿಲ್ಲ. ಆದ್ದರಿಂದ ಸರ್ಕಾರ ಜಾರಿಗೆ ತಂದಂತೆ  ಕಾನೂನಿನಲ್ಲಿರುವಂತೆ ಮಕ್ಕಳಿಗೆ ಹೊಡೆಯುವಂತಿಲ್ಲ. ಅವರಿಗೆ ಪ್ರೀತಿ ವಿಶ್ವಾಸದಿಂದಲೆ ಜ್ಞಾನ ನೀಡಬೇಕು. ಒಟ್ಟಾರೆ  ಇತ್ತೀಚಿನ ದಿನಗಳಲ್ಲಿ ಶಾಲೆಯ ಆರಂಭದಲ್ಲಿ ಮಕ್ಕಳ ಮನಸ್ಥಿತಿಗೆ ಹೊಂದಿಕೊಂಡು ಹೋಗುತ್ತಾ ಅವರನ್ನು ಓದಿನತ್ತ ಕೊಂಡೊಯ್ಯುವುದೇ  ಶಿಕ್ಷಕರ ಕೆಲಸ. ಮಕ್ಕಳ ಮನಸ್ಸು ಬಹಳ ಮೃದುವಾಗಿರುತ್ತದೆ. ಸರಿ ತಪ್ಪುಗಳನ್ನ ವಿಮರ್ಶೆ ಮಾಡುವಂತಹ ಶಕ್ತಿ ಇರುವುದಿಲ್ಲ. ಅಂತಹದರಲ್ಲಿ  ಜೀವನ ಎಂಬುದು ಒಂದುಕಲ್ಲು ಮುಳ್ಳುಗಳ ದಾರಿ. ಆ ದಾರಿಯಲ್ಲಿ  ಹೋಗಲು ಸಾಧ್ಯವಿಲ್ಲ. ಒಳ್ಳೆಯ ದಾರಿಯನ್ನು ಆಯ್ಕೆ ಮಾಡಿಕೊಂಡು ಆ ದಾರಿ ಯಲ್ಲಿ ಹೋಗುವಂತೆ ಮಾಡುವುದು. ನಮ್ಮ ಕರ್ತವ್ಯ. ಅದರಲ್ಲೂ ಮುಖ್ಯವಾಗಿ ಶಿಕ್ಷಕರ ಕೆಲಸ ಅಪಾರವಾದದ್ದು. ಒಟ್ಟಾರೆ ರಾಜ್ಯದ್ಯಂತ ಶಾಲೆಗಳು ತೆರೆಯುತ್ತಿದೆ. ಶಾಲೆಯಲ್ಲಿನ ಶಿಕ್ಷಕರೆಲ್ಲರೂ ಮಕ್ಕಳನ್ನು ಸ್ವಾಗತಿಸಲು ಸಂಭ್ರಮಿಸಿದ್ದಾರೆ. ತಳಿರು ತೋರಣಗಳನ್ನು ಹಾಕಿ  ಸ್ವಾಗತಿಸಲು ಸಿದ್ಧರಿದ್ದಾರೆ. ಅಕ್ಷರ ಕಲಿತವನು ಜೀವನದಲ್ಲಿ ಎಂದು ಸೋಲಲಾರ ತಾಯಿಯ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಎಂಬಂತೆ. ಮನೆಯಿಂದ ಹೊರಗೆ ಬಂದರೆ  ಶಿಕ್ಷಕರೇ ಗುರುಗಳಾಗುತ್ತಾರೆ. ಆ ಗುರುಗಳಿಗೆ ಗೌರವಿಸುತ್ತಾ ಮಕ್ಕಳು ಶಿಕ್ಷಣವನ್ನು ಕಲಿಯುತ್ತಾರೆ. ಒಟ್ಟಾರೆ ಶಾಲೆ ಪ್ರಾರಂಭದ ದಿನವೂ ಮಕ್ಕಳ ಜ್ಞಾನ ಅಭಿವೃದ್ಧಿಗೆ ಸಹಕಾರಿಯಾಗುವ ಒಂದು ಘಟ್ಟ ಎನ್ನುತ್ತಾ  ಬಾಲ ಕಾರ್ಮಿಕರನ್ನು ಹುಡುಕೋಣ  ಪ್ರತಿಯೊಂದು ಮಗುವು ತನಗೆ ದಕ್ಕ ಬೇಕಾದಂತಹ ಹಕ್ಕು ಪಡೆಯುತ್ತಾ  ಜೀವನದಲ್ಲಿ ಶಿಕ್ಷಣ ಪಡೆದು ಯಶಸ್ವಿಯನ್ನು ಪಡೆಯಲಿ ಎನ್ನುತ್ತಾ. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಹೇಳುತ್ತಾ. ರಾಜ್ಯದ್ಯಂತ ಶಾಲೆ  ಪ್ರಾರಂಭವಾಗುತ್ತಿದೆ. ಬನ್ನಿ ಮಕ್ಕಳೇ  ಶಾಲೆಗೆ ಹೋಗೋಣ. ವಿದ್ಯಾಭ್ಯಾಸವನ್ನು ಮಾಡಿ  ಜ್ಞಾನ ಅಭಿವೃದ್ಧಿಯನ್ನು ಪಡೆಯೋಣ. ದೇಶದ ಉದ್ದಾರಕ್ಕೆ ಕೈಜೋಡಿಸೋಣ. ಎಂದು ಹೇಳುತ್ತಾ . ನನ್ನ ಈ ಲೇಖನಕ್ಕೆ  ಅಂತಿಮ ವಿರಾಮವನ್ನು ಹಾಕುತ್ತಿದ್ದೇನೆ. ಜೈ ಹಿಂದ್ ಜೈ ಕರ್ನಾಟಕ ಮಾತೆ.

ಹೆಚ್. ಎಸ್. ಪ್ರತಿಮಾ ಹಾಸನ್.

ಸಾಹಿತಿ. ಗಾಯಕಿ.ಶಿಕ್ಷಕಿ. ಹಾಸನ.