ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಕಾನೂನು ಉಲ್ಲಂಘನೆಗೆ ನಾನು ಯಾವತ್ತೂ ಬೆಂಬಲಿಸಿದವನಲ್ಲ. ಸಾರ್ವಜನಿಕವಾಗಿ ಯಾವುದೇ ವೇದಿಕೆಯಲ್ಲಿಯೂ ಕೂಡ ನೇರವಾಗಿ ನನ್ನೊಂದಿಗೆ ಸಂವಾದಕ್ಕೆ ಯಾರು ಕೂಡ ಆಗಮಿಸಬಹುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಜುಲೈ 17 ರಂದು ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕವಾಗಿ ಕರೆಕೊಟ್ಟರು.

ಸುಮಿತ್ ರಾಜ್ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಯಾವುದೇ ರೀತಿಯ ತನಿಖೆ ಮಾಡುವುದಕ್ಕೆ ಸರಕಾರ ಹಾಗೂ ಸರಕಾರದ ಮಂದಿ ಮುಕ್ತವಾಗಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ನಾನು ಬೆಂಬಲಿಸುವವನಲ್ಲ. ನಾನೊಬ್ಬ ಜನಸಾಮಾನ್ಯರ ಸೇವಕ ಮತ್ತು ಇದುವರೆಗೂ ಪ್ರಾಮಾಣಿಕ, ಶುಭ್ರ, ಸ್ವಚ್ಛ ಜೀವನವನ್ನು ನಡೆಸಿದವ. ಯಾರಿಂದಲೂ ಕೆಟ್ಟ ಹಣವನ್ನು ಸ್ವೀಕರಿಸಿದವನಲ್ಲ. ಯಾರ ವೈಯಕ್ತಿಕ ತೇಜೋವಧೆಯನ್ನೂ ಮಾಡುವ ನೀಚತನವನ್ನು ಇದುವರೆಗೆ ಮಾಡಿದವನಲ್ಲ. ಹಿಂದೂ ಸಂಘಟನೆಗೆ ನಾನು ಸದಾ ಕಾಲ ಬೆಂಬಲಿಗನೇ ಹೊರತು ತಪ್ಪು ಮಾಡಿದವರಿಗೆ ಬೆಂಬಲಿಗನಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ವೈಯಕ್ತಿಕ ತೇಜೋವಧೆಗೆ ಪ್ರಯತ್ನಿಸುವವರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಖಡಾಖಂಡಿತವಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಸುನಿಲ್, ಶಾಂತಿಪ್ರಸಾದ್, ಮಂಡಲ ಅಧ್ಯಕ್ಷರಾದ ದಿನೇಶ್ ಪುತ್ರನ್, ರಂಜಿತ್ ಪೂಜಾರಿ, ರೈತ ಮೋರ್ಚಾದ ರಾಜೇಶ್ ಅಮೀನ್, ನಗರ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.