ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಬಜೆ ಕಿಂಡಿ ಅಣೆಕಟ್ಟಿನಿಂದ ಉಡುಪಿ ನಗರಕ್ಕೆ ಸರಬರಾಜು ಆಗುವ ಮುಖ್ಯ ಕೊಳವೆಯು ಮಣಿಪಾಲದಲ್ಲಿರುವ ನಗರಸಭೆಯ ಉಪ ಕಛೇರಿ ಎದುರು ಸೋರಿಕೆಯಾಗುತ್ತಿದ್ದು, ಸದರಿ ಕೊಳವೆಯ ದುರಸ್ಥಿ ಕಾರ್ಯ ಜೂನ್ 4 ರಂದು ಕೈಗೊಳ್ಳುವ ಹಿನ್ನೆಲೆ, ಸದರಿ ದಿನದಂದು ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.