ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಜೂನ್ 6 ರಂದು ನಿಗಧಿಪಡಿಸಲಾಗಿದ್ದ ತ್ರೈಮಾಸಿಕ ಅಂಚೆ ಅದಾಲತ್ ಅನ್ನು ಆಡಳಿತಾತ್ಮಕ ಕಾರಣಗಳಿಂದಾಗಿ ಮುಂದೂಡಿ, ಜೂನ್ 13 ರಂದು ಮಧ್ಯಾಹ್ನ 3.30 ಕ್ಕೆ ಮರುನಿಗಧಿಪಡಿಸಲಾಗಿದ್ದು, ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಜೂನ್ 6 ರ ಮೊದಲು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿಗೆ ಸಲ್ಲಿಸಬಹುದಾಗಿದೆ ಹಾಗೂ ಅದಾಲತ್ ನಡೆಯುವ ದಿನದಂದು ಹಾಜರಿದ್ದು, ಸಮಕ್ಷಮ ಚರ್ಚಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
