ಉಡುಪಿ, ಸೆ. 06: ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನವದೆಹಲಿ ಇವರು ಪ್ರಧಾನ ಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PMJANMAN) ಯೋಜನೆಯಡಿ ಬುಡಕಟ್ಟು ಸಮುದಾಯದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆಯಲು PMJANMAN Phase-1 ರಲ್ಲಿ IEC ಚಟುವಟಿಕೆಗಳನ್ನು ಡಿಸೆಂಬರ್ 2023 ರಿಂದ ಜನವರಿ 2024ರವರೆಗೆ ನಡೆಸಲಾಗಿತ್ತು. ಇದೀಗ PMJANMAN Phase-II  ರಲ್ಲಿ ಆಗಸ್ಟ್ 23 ಸೆಪ್ಟೆಂಬರ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಐ.ಟಿ,ಡಿ.ಪಿ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.