ಉಡುಪಿ, ಮಾ 06: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ 2024-25 ನೇ ಜನವರಿ ಆವೃತ್ತಿಯ ಪ್ರವೇಶಾತಿಗಳು ನಡೆಯುತ್ತಿರುವ ಹಿನ್ನೆಲೆ, ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿಯೂ ಸಹ ಕಛೇರಿ ತೆರೆದಿರುತ್ತದೆ ಎಂದು ಉಡುಪಿ ಕೆ.ಎಸ್.ಓ.ಯು ಕೇಂದ್ರದ ಪ್ರಾದೇಶಿಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.