ಉಡುಪಿ: ಹೆಬ್ರಿ ತಾಲೂಕಿನಲ್ಲಿರುವ ಜೈನರ ಪವಿತ್ರ ಕ್ಷೇತ್ರ ಇಲ್ಲಿಯ ಬಸದಿಗಳು ಮತ್ತು ಸ್ಮಾರಕಗಳು ಈತಿಹಾಸಿಕವಾಗಿ ಹುಂಚದ ಶ್ರೀ ಹೊಂಬುಜ ಜೈನ ಮಠದ ಶಾಖಾ ಮಠವಾಗಿರುವ ಶ್ರೀ ವರಂಗ ಜೈನ ಮಠದ ಅಧೀನ, ಆಡಳಿತ ಮಂಡಳಿ ಮತ್ತು ಸುಪರ್ದಿಯಲ್ಲಿದೆ. ಕಳೆದ ಶತಮಾನದ ಹಿಂದಿನವರೆಗೂ ಜೈನ ಮಠವು ಜೈನಾಚಾರ್ಯರ ನೆಲೆಯಾಗಿ, ಧರ್ಮ-ಜ್ಞಾನಗಳ ಕೇಂದ್ರವಾಗಿದ್ದು, ಇಂತಹ ಇತಿಹಾಸ ಪ್ರಸಿದ್ಧಿ ವರಂಗ ಕ್ಷೇತ್ರದ ಪರಿಚಯ ಇನ್ನಿತರೆ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಪ್ರವಾಸಿ ತಾಣ ಎಂದು ಪ್ರಕಟಿಸಿರುವುದರಿಂದ ಎಲ್ಲಾ ರೀತಿಯ ಜನರು ಇಲ್ಲಿಗೆ ಭೇಟಿ ನೀಡಿತ್ತಿರುವುದರಿಂದ ಇಲ್ಲಿಯ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ. 

ಆದ್ದರಿಂದ ಮುಂದಿನ ದಿನಗಳಲ್ಲಿ ಶ್ರೀ ವರಂಗ ಜೈನ ಮಠದ ಕ್ಷೇತ್ರದ ಬಗ್ಗೆ ಪ್ರಕಟಿಸುವಾಗ ಪ್ರವಾಸಿ ತಾಣ ಎಂಬುದರ ಬದಲಾಗಿ ಧಾರ್ಮಿಕ ಯಾತ್ರಾ ಕ್ಷೇತ್ರ ಎಂಬುದಾಗಿ ಪ್ರಕಟಿಸುವಂತೆ ಪ್ರಕಟಣೆ ತಿಳಿಸಿದೆ.