ಉಡುಪಿ, ಡಿಸೆಂಬರ್ 15: ಕನ್ನಡ ಭಾಷೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬoಧಿಸಿದ ವಿಷಯಗಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

    2019-20 ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯಗಳಿಂದ, ಯಾವುದೇ ವಿಷಯದ ಬಗ್ಗೆ ಕನ್ನಡದಲ್ಲಿ ಎಂ.ಫಿಲ್ ಪದವಿ ಪಡೆದ ಪ್ರೌಢ ಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಸಹಾಯಧನ, 2019-20 ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯಗಳಿಂದ ಯಾವುದೇ ವಿಷಯದ ಬಗ್ಗೆ ಕನ್ನಡದಲ್ಲಿ ಪಿಹೆಚ್.ಡಿ ಪದವಿ ಪಡೆದ ಮಹಾಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಸಹಾಯಧನ ಹಾಗೂ 2019 ರ ಜನವರಿಯಿಂದ ಡಿಸೆಂಬರ್ 2019 ರ ಒಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಸೃಜನೇತರ ಕನ್ನಡ ಗ್ರಂಥಗಳಿಗೆ ಸಹಾಯಧನ ನೀಡಲಾಗುವುದು.

     ಪಿ.ಹೆಚ್.ಡಿ ಮತ್ತು ಎಂ.ಫಿಲ್ ಪದವಿ ಪಡೆದ ಮಹಾಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಸೇವಾಸಿಂಧು ಮೂಲಕ ಹಾಗೂ ಸೃಜನೇತರ ಪ್ರಕಟಿತ ಗ್ರಂಥಗಳಿಗೆ ನೇರವಾಗಿ ಅರ್ಜಿ ಆಹ್ವಾನಿಸಲಾಗಿದೆ.

     ಸೃಜನೇತರ ಪ್ರಕಟಿತ ಗ್ರಂಥಗಳಿಗೆ ನಿಗದಿತ ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‌ಸೈಟ್ www.kannadasiri.in  ನಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸಲು ಜನವರಿ 16 ಕೊನೆಯ ದಿನ. 

     ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವAತೆ ಇಲಾಖೆಯ ಪ್ರಕಟಣೆ ತಿಳಿಸಿದೆ.