ಉಜಿರೆ: ಕನ್ಯಾಡಿ ರಾಮಕ್ಷೇತ್ರದ ಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಸೋಮವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.

ಪೂಜ್ಯ ಹೆಗ್ಗಡೆಯವರ ನೇತೃತ್ವದಲ್ಲಿ ಲಕ್ಷದೀಪೋತ್ಸವದ ಎಲ್ಲಾ ಕಾರ್ಯಕ್ರಮಗಳೂ ಸುಗಮವಾಗಿ ನಡೆದು ಎಲ್ಲೆಲ್ಲೂ ಶಾಂತಿ, ಸಾಮರಸ್ಯ ಸುಖ-ಶಾಂತಿ ನೆಲೆಸಲಿ. ಲೋಕಕಲ್ಯಾಣವಾಗಲಿ ಎಂದು ಶುಭ ಹಾರೈಸಿದರು.