ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಉರ್ವಾಸ್ಟೋರ್ನಲ್ಲಿರುವ ಸಾರ್ವಾಜನಿಕ ಶೌಚಾಲಯವೊಂದು ಅನೇಕ ವರ್ಷಗಳಿಂದ ಅರ್ಧ ಕಟ್ಟಿ ಕೈಬಿಡಲಾಗಿದೆ. ಆದುದರಿಂದ ಅದನ್ನು ಸಂಪೂರ್ಣ ಮಾಡಬೇಕೆಂದು ಸ್ಥಳೀಯರ ಬೇಡಿಕೆಯಾಗಿದ್ದು, ಸ್ಥಳೀಯ ಮೈದಾನದಲ್ಲಿರುವ ಅವ್ಯವಸ್ಥೆ ಮತ್ತು ಸ್ಥಳೀಯ ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆ ಶಾಸಕರಾದ ಐವನ್ ಡಿʼಸೋಜಾರವರಿಗೆ ಮನವಿಯನ್ನು ನೀಡಲಾಯಿತು.

ಈ ಬಗ್ಗೆ ಉರ್ವಾ ಸ್ಟೋರ್ ನಿಂದ ಅಶೋಕ್ ನಗರ ಡೊಮಿನಿಕ್ ಚರ್ಚ್ ಗೆ ಹೋಗುವ ರಸ್ತೆಯು ತೀರಾ ನಾದುರಸ್ಥಿಯಲ್ಲಿದ್ದು, ಕೂಡಲೇ ದುರಸ್ಥಿ ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಇಂಜಿನಿಯರ್ ಉಪಸ್ಥಿತರಿದ್ದು ಅಸ್ಪತ್ರೆ ರಸ್ತೆಗೆ ಮಹಾತ್ಮಾಗಾಂಧಿ ಯೋಜನೆಯಲ್ಲಿ ಈಗಾಗಲೇ ಮಂಜೂರಾತಿ ನೀಡಲಾಗಿದ್ದು, ಈ ರಸ್ತೆಯನ್ನು ಕೂಡಲೇ ಕೈಗೆತ್ತಿಕೊಳ್ಳಲು ಕ್ರಮಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ. ಈ ಭಾಗಗಳ ಅಭಿವೃದ್ದಿ ಕಾಮಗಾರಿಗಳು ಕುಂಠಿತಗೊಂಡಿರುವುದರಿಂದ ಇದನ್ನು ಕೂಡಲೇ ಪ್ರಾರಂಭಿಸಬೇಕೆಂದು ಮನಪಾ ಆಯುಕ್ತರಿಗೆ ಐವನ್ ಡಿʼಸೋಜಾರವರು ನಿರ್ದೇಶನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿʼಸೋಜಾರವರು ಅಭಿವೃದ್ದಿ ಕಾಮಗಾರಿಗೆ ಈಗಾಗಲೇ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಅಯುಕ್ತರಿಗೆ ದೂರವಾಣಿ ಮೂಲಕ ಒತ್ತಾಯಿಸಿದ್ದಾರೆ. ಕುಡಿಯುವ ನೀರು, ಒಳಚರಂಡಿ, ರಸ್ತೆ, ದಾರಿದೀಪ, ಚರಂಡಿ ವ್ಯವಸ್ಥೆಗಳನ್ನು ಸದಾ ಅಭಿವೃದ್ದಿ ಪಡಿಸುವಲ್ಲಿ ಮಹಾನಗರ ಪಾಲಿಕೆ ಇಂದು ಅಧ್ಯತೆ ಮೇಲೆ ಪರಿಗಣಿಸಬೇಕೆಂದು ಐವನ್ ಡಿʼಸೋಜಾ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಚೇತನ್ ಕುಮಾರ್, ಮಹಿಳಾ ಕಾಂಗ್ರೆಸ್ ರೂಪಾ ಚೇತನ್, ಯುವ ಕಾಂಗ್ರೆಸ್ ಅಧ್ಯಕ್ಷ ವೆಲ್ವೆನ್, ಉಪಾಧ್ಯಕ್ಷ ಪೃಥ್ವಿ ಸಾಲಿಯಾನ್, ವಾರ್ಡ್ ಅಧ್ಯಕ್ಷರುಗಳಾದ ಜಯರಾಮ್ ಮತ್ತು ಟಿ.ಸಿ ಗಣೇಶ್, ಮಾಜಿ ಕಾರ್ಪೊರೇಟರ್ ಪದ್ಮನಾಭ ಪನ್ನೀಕ್ಕರ್, ಎಸ್.ಡಿ ಮಾಬೆನ್, ಗಂಗಾಧರ ಸುಂಕದಕಟ್ಟೆ ಪುರಂದರ, ರವಿ ಜಾನಕಿ ರಮಣಿ, ಡಿಂಪಲ್, ಲತೀಶ್ ಉರ್ವ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.