ಕಾಂಗ್ರೆಸ್ ಮುಖಂಡ, ಹಿಮಾಚಲ ಪ್ರದೇಶದ ಮಾಜೀ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಗುರುವಾರ ಮುಂಜಾವ ನಾಲ್ಕು ಗಂಟೆಗೆ ನಿಧನರಾದರು.
ಏಪ್ರಿಲ್‌ನಲ್ಲಿ ಒಮ್ಮೆ ಹುಶಾರು ತಪ್ಪಿ ಚಿಕಿತ್ಸೆ ಪಡೆದಿದ್ದ ವೀರಭದ್ರ ಸಿಂಗ್ ಅವರನ್ನು ಮೊನ್ನೆ ಮತ್ತೆ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ಬಾರಿ ಮುಖ್ಯಮಂತ್ರಿ ಆಗಿದ್ದ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.