2021ರ ವೀರರಾಣಿ ಅಬ್ಬಕ್ಕ ಉತ್ಸವವನ್ನು ಡಿಸೆಂಬರ್ ತಿಂಗಳ 21ರಂದು ಉಳ್ಳಾಲ ನಗರಸಭೆಯ ಅಧೀನದಲ್ಲಿರುವ ಉಳ್ಳಾಲದ ಮಹಾತ್ಮಗಾಂಧಿ ರಂಗ ಮಂದಿರದಲ್ಲಿ ಆಚರಿಸಲು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯು ನಿರ್ಧರಿಸಿದೆ.

ಆ ಪ್ರಯುಕ್ತ ನಡೆದ ಬೆಳ್ಳಿ ಉತ್ಸವದ ಮುಹೂರ್ತ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‍ಸಾರ್ ಅವರು ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಚರಿಸಲ್ಪಡುವ 25ನೇ ವರ್ಷದ ಅಬ್ಬಕ್ಕ ಉತ್ಸವ ಸಂದರ್ಭದಲ್ಲೇ ತುಳು ಸಾಹಿತ್ಯ ಅಕಾಡೆಮಿಯೂ 25 ವರ್ಷಗಳನ್ನು ಪೂರೈಸಿದೆ ಎಂದು ಹೇಳಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿಯವರು ಮಾತನಾಡುತ್ತಾ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಲ್ಲಿ ವಿವಿಧರಾಜಕೀಯ ಪಕ್ಷಗಳ, ವಿವಿಧ ಜಾತಿ-ಮತಗಳ, ವಿವಿಧ ಭಾಷೆಗಳ ಸದಸ್ಯರಿದ್ದೇವೆ. ಇದು ವೀರರಾಣಿ ಅಬ್ಬಕ್ಕಳ ಸಾಮರಸ್ಯದ ಆದರ್ಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಉಳ್ಳಾಲದ ಚೀರುಂಭ ಭಗವತೀ ಕ್ಷೇತ್ರದ ಅರ್ಚಕರಾದ ಶ್ರೀ ಬಾಲಕೃಷ್ಣ ಮಂಜಪ್ಪ ಕಾರ್ನವರ್ ಧಾರ್ಮಿಕ ವಿಧಿಯನ್ನು ನೇರವೇರಿಸಿದರು.

ಸೌಹಾರ್ದ ಸಾಮರಸ್ಯಕ್ಕೆ ಹೆಸರಾದ ಉಳ್ಳಾಲದ ವೀರರಾಣಿ ಅಬ್ಬಕ್ಕಳ ಉತ್ಸವ ಆಚರಣೆಯನ್ನು ಊರುಸ್ ಸಂದರ್ಭದಲ್ಲಿ ನಡೆಸುವುದು ಉತ್ತಮ ಕಾರ್ಯವಾಗಿದೆ ಎಂದು ಸೈಯದ್ ಮದನಿ ದರ್ಗಾಅಧ್ಯಕ್ಷರಾದಹಾಜಿ.ಶ್ರೀ ಅಬ್ದುಲ್ ರಶೀದ್‍ರವರು ತಿಳಿಸಿದರು.  

ಈ ಸಂದರ್ಭದಲ್ಲಿ ಗಣ್ಯರಾದ ಕೆ.ಸೀತರಾಮ ಬಂಗೇರ, ಕೆ.ಕೃಷ್ಣಪ್ಪ ಸಾಲಿಯಾನ್, ಜಗದೀಶ್‍ಕಾರ್ನವರ್, ರವೀಂದ್ರರಾಜ್, ಆದಿಕುಮಾರ್ ಬಿ ಬಂದ್‍ಜೈನ್, ವೈಶಾಖ ಎ ಬಂದ್‍ಜೈನ್, ಯು.ಎಂ.ಅಬ್ದುಲ್‍ಜಬ್ಬಾರ್, ಅಬ್ದುಲ್‍ಕಲೀಲ್, ಯು.ಬಿ. ರಾಜೇಶ್ ಕೆರೆಬೈಲ್, ನಮಿತಾಗಟ್ಟಿ, ಸುಂದರ ಉಳಿಯ, ಚೇತನಾ ಪೂಜಾರಿ, ನರೇಂದ್ರ ಕೆರೆಕಾಡು, ದಾಮೋದರ ಉಳ್ಳಾಲ್, ಪ್ರಸಾದ್ ಕುಮಾರ್ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಕೋಶಾಧಿಕಾರಿ ಆನಂದ ಕೆ ಅಸೈಗೋಳಿ, ಉಪಾಧ್ಯಕ್ಷರಾದ ಯು.ಪಿ. ಆಲಿಯಬ್ಬ, ಪದಾಧಿಕಾರಿಗಳಾದ ಅಬ್ದುಲ್ ಅಜೀಜ್ ಹಕ್, ವಾಸು ದೇವರಾವ್, ಡಿ.ಎನ್.ರಾಘುವ, ಸತೀಶ್ ಭಂಡಾರಿ, ರತ್ನಾವತಿಜೆ ಬೈಕಾಡಿ, ಶಶಿಕಲಾ ಗಟ್ಟಿ, ವಾಣಿ ಲೋಕಯ್ಯ, ಅನುಪಮ ಜೆ, ಹೇಮಾಯು, ಮಲ್ಲಿಕಾ ಭಂಡಾರಿ, ಸರೋಜಾ ಕುಮಾರಿ, ಸತ್ಯವತಿಜೆ.ಕೆ, ಮಾಧವಿ ಉಳ್ಳಾಲ್, ಸರೋಜಾ ರಾವ್, ಶಶಿಕಾಂತಿ ಉಳ್ಳಾಲ್, ವಸಂತಿ ಮರೋಳಿ, ಸುಷ್ಮಾ ಜನಾರ್ಧನ್, ಆಯಿಶಾ ಮಿನಾಝ್, ಲತಾ ಶ್ರೀಧರ್, ಡಾ. ಮೀನಾಕ್ಷಿ ರಾಮಚಂದ್ರ, ರಾಜಲಕ್ಷ್ಮಿ, ಕಾವ್ಯಶ್ರೀ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.  ಕೆ. ಎಂ. ಕೆ ಮಂಜನಾಡಿಯವರು ಧನ್ಯವಾದ ಸಲ್ಲಿಸಿದರು.