ಭಾರತ್‌ ಕೋಆಪರೇಟಿವ್ ಬ್ಯಾಂಕ್ ಮುಂಬಾಯಿ ಲಿಮಿಟೆಡ್‌ನ ಅಧ್ಯಕ್ಷರಾದ  ಸೂರ್ಯಕಾಂತ್‌ ಜೆ. ಸುವರ್ಣ ಇವರು ಇoದು ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಪ್ರಧಾನಕ ಛೇರಿಗೆ ಸೌಹಾರ್ದಯುತವಾದ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಹರೀಶ್‌ ಆಚಾರ್ಯಇವರು ಸ್ವಾಗತಿಸಿ ಅಭಿನಂದಿಸಿ ಗೌರವಿಸಿದರು. ಭಾರತ್ ಬ್ಯಾಂಕ್‌ನoತಹ ಬೃಹತ್ ಶೆಡ್ಯೂಲ್ಡ್ ಸಹಕಾರ ಬ್ಯಾಂಕ್‌ನಅಧ್ಯಕ್ಷರಾದ ಶ್ರೀ ಸೂರ್ಯಕಾಂತ್‌ಜೆ. ಸುವರ್ಣಇವರು ನಮ್ಮ ಸಂಸ್ಥೆಗೆ ಭೇಟಿ ನೀಡಿ ನಮ್ಮ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಇನ್ನಷ್ಟು ಬೆಳವಣಿಗೆಗೆ ಇರುವ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಿರುವುದುನಮಗೆ ಹೆಮ್ಮೆ ಹಾಗೂ ಗೌರವದ ಸಂಗತಿಯಾಗಿದೆ ಎoದು ಬ್ಯಾಂಕ್‌ನ ಅಧ್ಯಕ್ಷರಾದ ಹರೀಶ್‌ ಆಚಾರ್ಯರವರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.

ಸಹಕಾರ ಬ್ಯಾಂಕುಗಳು ಸಾಮಾನ್ಯ ಜನರ ಆಶಾಕಿರಣವಾಗಿದ್ದು ಕಾರ್ಪೋರೇಟ್ ಸಂಸ್ಥೆಗಳ ಮಾನಸಿಕತೆಯಿಂದ ಕೆಲಸ ಮಾಡದೇ ಸಹಕಾರದೃಷ್ಟಿಕೋನದಿಂದ ಯೋಚಿಸಿ ಕಾರ್ಯಕ್ರಮವನ್ನು ಹಾಕಿಕೊಂಡಾಗ ನಾವು ನಮ್ಮನ್ನು ನಂಬಿಕೊAಡಿರುವ ಮಧ್ಯಮ ಮತ್ತು ಕೆಳವರ್ಗದ ಸಾಮಾನ್ಯ ಜನರನ್ನುತಲುಪಿ ಅವರಿಗೆ ಸಮರ್ಪಕ ಸೇವೆಯನ್ನು ನೀಡಲು ಸಾಧ್ಯಎಂದು ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್‌ನ ಅಧ್ಯಕ್ಷರಾದ ಸೂರ್ಯಕಾಂತ್‌ಜೆ. ಸುವರ್ಣ ಇವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಬ್ಯಾoಕ್‌ನ ಸಮಾಲೋಚಕರಾದ ಜಯರಾಮ್ ಶೆಟ್ಟಿಕೆ.,ಪ್ರಧಾನ ವ್ಯವಸ್ಥಾಪಕರಾದ ಸುರೇಶ್‌ ಕುಮಾರ್ ಬಿ., ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ನಿತಿನ್ ಶೆಟ್ಟಿ, ಶಾಖಾ ವ್ಯವಸ್ಥಾಪಕರಾದ ಚೇತನ್‌ ಕುಮಾರ್ ಹಾಗೂ ಸಿಬ್ಬಂದಿಗಳುಉಪಸ್ಥಿತರಿದ್ದರು.