ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ಇದರ ಅಮೋನಿಯಾ ಘಟಕದ ಇಂಧನ ದಕ್ಷತೆ ಸುಧಾರಣೆ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾರತ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವರಾದ ಭಗವಂತ ಖೂಬಾ, ದ.ಕ.ಸಂಸದರು ಬಿಜೆಪಿ ರಾಜ್ಯಾಧ್ಯಕ್ಷರು ನಳಿನ್ ಕುಮಾರ್, ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ. ಭಾಗವಹಿಸಿದರು. ಸಚಿವರಾದ ಎಸ್ ಅಂಗಾರ, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ್ ಶೆಟ್ಟಿ, ಎಂ.ಸಿ.ಎಫ್ ಸಂಸ್ಥೆಯ ಪ್ರಭಾಕರ್ ರಾವ್ ಹಾಗು ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಛೇರಿಗೆ ಭೇಟಿ ನೀಡಿದ ಭಾರತ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವರಾದ ಭಗವಂತ ಖೂಬಾರವರನ್ನು ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ. ಸ್ವಾಗತಿಸಿ ಅಭಿನಂದಿಸಿದರು. ಶಾಸಕರಾದ  ವೇದವ್ಯಾಸ ಕಾಮತ್, ಪ್ರತಾಪ್ ಸಿಂಹ ನಾಯಕ್,  ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ, ಮಾಜಿ ಶಾಸಕರಾದ ಮೋನಪ್ಪ ಭಂಡಾರಿ, ಪ್ರಮುಖರಾದ  ನಿತಿನ್ ಕುಮಾರ್, ರಾಜೇಶ್ ಕಾವೇರಿ, ಸಂತೋಷ್ ಕುಮಾರ್ ರೈ, ಪ್ರಭಾಮಾಲಿನಿ, ಕಸ್ತೂರಿ ಪಂಜ, ಜಗದೀಶ ಶೇಣವ,  ರೂಪ ಬಂಗೇರ, ಸುರೇಂದ್ರ  ಉಪಸ್ಥಿತರಿದ್ದರು.