ಪೆರ್ನಾಜೆ: ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆ ಮಾತಿನಂತೆ ನಮ್ಮ ಹಿರಿಯರು ಹೇಳುತ್ತಿದ್ದ ಮಾತು ಅಕ್ಷರಶಃ ಸತ್ಯ ನಾವು ಮಕ್ಕಳಿಗಾಗಿ ಆಸ್ತಿ ಮಾಡಬಾರದು ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು ಆಗಲೇ ಅವರು ಸಮಾಜಕ್ಕೆ ದೊಡ್ಡ ಕೊಡುಗೆಯಾಗುತ್ತಾರೆ ಎಂದು ರಾಷ್ಟ್ರೀಯ ಪುರಸ್ಕೃತ ಅಂಕಣಕಾರ ಜೇನು ಕೃಷಿ ತಜ್ಞರಾದ ಕುಮಾರ್ ಪೆರ್ನಾಜೆ ಹೇಳಿದರು.

ಗುರುದೇವ ಲಲಿತಕಲಾ ಅಕಾಡೆಮಿಯ ವತಿಯಿಂದ ಕನಕ ಮಜಲು ಕನಕ ಕಲ ಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದ ನೃತ್ಯೋತ್ಸವ ಹಾಗೂ ಚಿತ್ರಕಲಾ ಪ್ರದರ್ಶನ ನ.27ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಾ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಕೆ ಜೊತೆ ಮಕ್ಕಳಿಗೆ ಕಲೆಗಳಲ್ಲಿ ಆಸಕ್ತಿ ಮೂಡಿಸಿ ಕಲೆ ನಿಂತ ನೀರಾಗದೆ ಸದಾ ಹರಿಯುವಂತೆ ಮಾಡಿದಾಗ ಕಲೆ ಪ್ರಕಾಶಮಾನವಾಗಿ ಬೆಳಕಿಗೆ ಬಂದು ಕಲೆಗೆ ಬೆಲೆ ಬರುತ್ತದೆ.ಕಲೆಗಳು ನಮ್ಮ ಅಪೂರ್ವ ಮುತ್ತುಗಳು ಅಂತಹ ಕೆಲಸವನ್ನು ಡಾ: ಚೇತನ ರಾಧಕೃಷ್ಣ ದಂಪತಿಗಳು ಇಂತಹ ಗ್ರಾಮೀಣ ಭಾಗದಲ್ಲಿ ಮಾಡುತ್ತಿದ್ದು ತಾನು ಇತರರನ್ನು ಬೆಳೆಸಿದರೆ ತನಗೆ ಅರಿವಿಲ್ಲದೆ ನಾವು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೇವೆಂದು ಪೆರ್ನಾಜೆ ನುಡಿದರು.

ಗುರುದೇವ ಲಲಿತ ಕಲಾ ಅಕಾಡೆಮಿ ಯ ಕಲಾ ನಿರ್ದೇಶಕಿ ಡಾ: ಚೇತನಾ ರಾಧಾಕೃಷ್ಣ ಪಿಎಂ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಡ್ಕಾರ್ ವಿನೋಬಾ ನಗರ ಗಣೇಶ ಕ್ಯಾಶು ಪದ್ಮಾವತಿ ಉಪೇಂದ್ರ ಕಾಮತ್ ಸಂದರ್ಭೋಚಿತವಾಗಿ ಕನಕ ಕಲಾಗ್ರಾಮದಲ್ಲಿ ಉತ್ತಮ ರೀತಿಯಲ್ಲಿ ಕಲಾ ಪ್ರದರ್ಶನಗೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ನುಡಿದರು ಕನಕಮಜಲು ಯುವಕ ಮಂಡಲದ ಅಧ್ಯಕ್ಷರಾದ  ಚಂದ್ರಶೇಖರ್ ನಡಿಲು, ಕನಕಮಜಲು  ಸುವರ್ಣ ಮಹಿಳಾ ಮಂಡಲದ ಅಧ್ಯಕ್ಷರಾದ ಸುಶೀಲ, ನಿವೃತ್ತ ಹಿರಿಯ ಅರಣ್ಯ ಅಧಿಕಾರಿಗಳಾದ ಆನಂದ ಮೂರ್ಚೆ ಬೆಂಗಳೂರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶುಭ ಹಾರೈಸಿದರು.

ಕೇರಳ ,ಚೆನ್ನೈ ,ಅಸ್ಸಾಂ ,ವೆಸ್ಟ್ ಬೆಂಗಾಲ್, ಮಂಡ್ಯ ಮೈಸೂರ್ ,ಧಾರವಾಡ, ಬೆಂಗಳೂರು, ಶಿವಮೊಗ್ಗ ಕುಶಾಲ್ನಗರ ಮುಂತಾದ ಕಡೆಗಳಿಂದ ಕಲಾವಿದರು ಭಾಗವಹಿಸಿದ್ದರು ಸಮೂಹ ಭರತನಾಟ್ಯ ,ಏಕವ್ಯಕ್ತಿ ನೃತ್ಯ ,ಯುಗಳ ನೃತ್ಯ ಒಡಿಸ್ಸಿ  ಹೀಗೆ ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭರತನಾಟ್ಯ ಶಾಸ್ತ್ರೀಯ ಕಲಾ ನೃತ್ಯ ಪ್ರಕಾರಗಳು ಪ್ರದರ್ಶನಗೊಂಡವು ನೃತ್ಯ ಕಲರವಕ್ಕೆ ವರ್ಣ ರಂಜಿತ ತೆರೆ.

ಬೆಳಕು ವಿನ್ಯಾಸದಲ್ಲಿ ಮಧು ಮತ್ತು ಮನೋಜ್ ಸಹಕರಿಸಿದರು ಕಲಾಸಕ್ತರನ್ನು ರಾಗ ಲಯ ನೃತ್ಯ  ತಾಳದಲ್ಲಿ ತೇಲಾಡಿಸಿದೆ ಮೆದಿನಿ  ಉತ್ಸವ ನೆರೆದ  ಕಲಾಸಕ್ತರನ್ನು ಮನಸೂರೆಗೊಂಡಿತು.

ದಿಶಾ ದಿವಾಕರ್ ಸೆಟ್ಟಿ ಹಿತ್ಲು ,ಕು ಚಂದನ ಶ್ರೀಧರ್ ,ಮೂರ್ಚೆ ,ಕೃತಿಕ್ ಹರೀಶ್ ಮೂರ್ಚೆ ಉತ್ತಮ ಚಿತ್ರ ಕಲಾವಿದರನ್ನು ಖ್ಯಾತ ವಿದ್ವಾನ್ ಹನುಮಂತರಾಜ್ ಮೃದಂಗವಾದಕರು, ಕೆಎಲ್ ಆಚಾರ್ಯ ಚಿತ್ರಕಲಾ ವಿನ್ಯಾಸಕರು ಮೈಸೂರು ಕನಕ ಮಜಲು ಸಹಕಾರಿ ಸಂಘ ಮುಖ್ಯ ನಿರ್ವಹಣಾಧಿಕಾರಿ ಲೋಹಿತ್ ಕುದ್ಕುಳಿ ಪುತ್ತೂರು ಎಪಿಎಂಸಿ ನಿರ್ದೇಶಕರಾದ ದುಗ್ಗಳ ತೀರ್ಥಾನಂದ ಯುವ ಸಂಯೋಜನಾಧಿಕಾರಿ ಸುಳ್ಯ ದೇವರಾಜ್ ಮುತ್ಲಾಜೆ ಕಲಾವಿದರನ್ನು ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.

ಮೂರ್ಚೆ ನಂದರ ವಂಶ ಒಕ್ಕಲಿಗ ಗೌಡ ತಲಕಾಡು ಟ್ರಸ್ಟ್ ನ ಕೆ ಎಸ್ ಗೋಪಾಲಕೃಷ್ಣ ಮೂರ್ಚೆ ಸ್ವಾಗತಿಸಿದರು. ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಪಿಎಂ  ವಂದಿಸಿದರು. ಬೆಳ್ಳಾರೆ ಡಾ ಶಿವರಾಮ ಕಾರಂತರ ಸಪ್ರದ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.