ಕಾರ್ಕಳ ತಾಲೂಕು ನೂತನ ತಹಶೀಲ್ದಾರ್ ಪ್ರಕಾಶ್ ಎಸ್. ಮರಬಳ್ಳಿ ಇವರಿಗೆ ಸ್ವಾಗತ ಕೋರಿದ ರಾಜ್ಯ ಸರಕಾರಿ ನೌಕರರ ಸಂಘ, ತಾಲೂಕು ಶಾಖೆ, ಕಾರ್ಕಳ

ಕಾರ್ಕಳ ತಾಲೂಕಿನ ನೂತನ ತಹಶೀಲ್ದಾರರಾಗಿ ಕರ್ತವ್ಯಕ್ಕೆ ಹಾಜರಾಗಿರುವ ಕೆ.ಎಸ್.ಎಸ್. ಅಧಿಕಾರಿ ಪ್ರಕಾಶ ಎಸ್. ಮರಬಳ್ಳಿಯವರನ್ನು ಅವರ ಕಛೇರಿಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.

ನೂತನ ತಹಶೀಲ್ದಾರರು ತಾಲೂಕಿನ ಆಡಳಿತದಲ್ಲಿ ತನ್ನದೇ ಆದ ಹೊಸ ಕಲ್ಪನೆಗಳ ಬಗ್ಗೆ ಈ ಸಮಯದಲ್ಲಿ ವಿಚಾರ ವಿನಿಮಯ ಮಾಡಿಕೊಂಡು ಸಂಘದ ಸಂಪೂರ್ಣ ಸಹಕಾರವನ್ನು ಕೋರಿದರು.  ಸಂಘದ ಅಧ್ಯಕ್ಷರಾದ ಜೋಕಿಂ ಮೈಕಲ್ ಹೆಚ್. ಪಿಂಟೊರವರು ಮಾತನಾಡಿ  ತಹಶೀಲ್ದಾರ್ ಅವರ ಜೊತೆ ತಾಲೂಕಿನ ಕ್ರಿಯಾಶೀಲ ಆಡಳಿತಕ್ಕೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ  ಸಂಘದ ಉಪಾಧ್ಯಕ್ಷರಾದ ಮಂಜುನಾಥ ನಾಯಕ್, ರಾಜ್ಯ ಪರಿಷತ್ ಸದಸ್ಯರಾದ ಬಾಲಕೃಷ್ಣ ಎನ್., ಖಜಾಂಚಿ ಬಿ.ವಿ. ಶಿವರಾಮ್ ರಾವ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರವಿಕುಮಾರ್, ವಿಶ್ವನಾಥ್, ಸೈಮನ್ ಡಿ’ಮೆಲ್ಲೊ, ರೆಹಮಾನ್, ಚಂದ್ರಕಾಂತ್ ಹಾಜರಿದ್ದರು. ರಾಜಾರಾಮ್ ಶೇರ್ವೇಗಾರ್ ಧನ್ಯವಾದ ನೀಡಿದರು.