ಅತಂತ್ರ ಸಂಸತ್‌ನಲ್ಲಿ ಎಡ ಪಕ್ಷಗಳು ಒಗ್ಗಟ್ಟು ತೋರದ್ದರಿಂದ ನೇಪಾಳ ಅಧ್ಯಕ್ಷೆ  ವಿದ್ಯಾದೇವಿ ಭಂಡಾರಿ ಮೂರನೆಯ ಬಾರಿ ಸಂಸತ್ತು ವಿಸರ್ಜಿಸಿದ್ದನ್ನು ಸುಪ್ರೀಂ ಕೋರ್ಟ್ ಮರು ಸ್ಥಾಪಿಸಿ ನೇಪಾಳ ಕಾಂಗ್ರೆಸ್‌ನ ಶೇರ್ ಬಹದ್ದೂರ್ ದೇವುಬಾರನ್ನು ಪ್ರಧಾನಿಯಾಗಿ ನೇಮಿಸಿದೆ.

ಸಂಸತ್ತು ವಿಸರ್ಜನೆ ವಿರೋಧಿಸಿ ಪ್ರತಿಪಕ್ಷಗಳು 30ರಷ್ಟು ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದರು. ಜಸ್ಟಿಸ್ ಶುಮ್ಯೇರ್ ರಾಣಾ ನೇತೃತ್ವದ ಐವರ ಸುಪ್ರೀಂ ಕೋರ್ಟ್ ಪೀಠ ಈ ತೀರ್ಪು ನೀಡಿದೆ. ಕಾಂಗ್ರೆಸ್‌ಗೂ ಬಹುಮತ ಇಲ್ಲ. ಯಾರ ಬೆಂಬಲ ಸಿಗುತ್ತದೆ ನೋಡಬೇಕಷ್ಟೆ.