ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ ತಾಲೂಕಿನ ಮೂಡುಬಿದಿರೆ ಪುರಸಭಾ ವ್ಯಾಪ್ತಿ ಹಾಗೂ ಪಡುಮಾರ್ನಾಡು ಪಂಚಾಯತ್ ಸಂಧಿಸುವ ರಾಜ್ಯ ಹೆದ್ದಾರಿಯ ಬದಿಯ ಸ್ಥಳದಲ್ಲಿ ಪಡುಮಾರ್ನಾಡು ಪಂಚಾಯತ್ ನ ಮಾಜಿ ಅಧ್ಯಕ್ಷ ರು ಹಾಗೂ ಹಾಲಿ ಸದಸ್ಯರು ವಾಸವಾಗಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಪ್ರತೀ ವರ್ಷವೂ ಮಳೆಗಾಲದ ಸಮಯದಲ್ಲಿ ಆ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಮುಖ್ಯ ರಸ್ತೆಯ ಅಡಿಯಲ್ಲಿ ಇದ್ದ ತೋಡನ್ನು ಮುಚ್ಚಿರುವದು. ಹಿಂದೆ ಅಲ್ಲಿ ಮಳೆಯ ನೀರು ಪಶ್ಚಿಮ ದಿಂದ ಪೂರ್ವಕ್ಕೆ ಸರಾಗವಾಗಿ ಹರಿಯುವಂತೆ ತೋಡು ಉತ್ತಮವಾಗಿತ್ತು. ಆದರೆ ಕಸ, ಕಡ್ಡಿ, ಮಣ್ಣು, ಇತ್ಯಾದಿ ಪ್ರತೀ ವರ್ಷ ಶೇಖರಣೆಗೊಳ್ಳುತ್ತಾ ಇದೀಗ ತೋಡು ಸಂಪೂರ್ಣ ಕಣ್ಮರೆಯಾಗಿ ಮುಖ್ಯ ರಸ್ತೆಯ ಪ್ರದೇಶ ಕೆಸರು ಗದ್ದೆಯಂತಾಗಿದೆ. ಆ ಪ್ರದೇಶದಲ್ಲಿ ಯಾವುದೇ ವ್ಯಕ್ತಿ, ಬಿಡಿ, ಲಘು ವಾಹನದವರೂ ಮಳೆ ಬರುತ್ತಿರುವಾಗ ಕನ್ನಡಿ ಕೆಳಗೆ ಮಾಡಿ ಚಲಿಸುವಂತೆ ಇಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದರೆ ಇಡೀ ವಾಹನ, ವ್ಯಕ್ತಿಗಳು ಕೆಸರಿನಿಂದ ತೊಯ್ದು ತೊಪ್ಪೆಯಾಗುತ್ತಾರೆ. 

ರಾಜ್ಯ ಹೆದ್ದಾರಿ ಪ್ರಾಧಿಕಾರವು ತಕ್ಷಣ ಈ ಪ್ರದೇಶದಲ್ಲಿ ಇದ್ದ ತೋಡನ್ನು ಬಿಡಿಸಿ ದಾರಿಹೋಕರು, ಲಘು ವಾಹನದವರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು. ಮೂಡುಬಿದಿರೆ ಪುರಸಭಾ, ಹಾಗೂ ಪಡುಮಾರ್ನಾಡು ಪಂಚಾಯತ್ ನವರು ಈ ಬಗ್ಗೆ ಮುತುವರ್ಜಿ ವಹಿಸಬೇಕು.